Wednesday, January 22, 2025
ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಚೇಜ಼್‌ನಲ್ಲಿ ಅರವಿಂದ್ ಬೋಳಾರ್ ಕಾಮಿಡಿ-ಕಹಳೆ ನ್ಯೂಸ್

ಸಿನಿಮಾಡೆಸ್ಕ್: ರಾಧಿಕಾ ನಾರಾಯಣ್ ಮತ್ತು ಅರವಿಂದ್ ನರಸಿಂಹರಾಜು ನಾಯಕ ನಾಯಕಿಯರಾಗಿ ನಟಿಸಿರುವ ಚಿತ್ರ ಚೇಜ್. ಶೀರ್ಷಿಕೆಯಂಥಾದ್ದೇ ಆವೇಗದ ಕಥೆಯನ್ನೊಳಗೊಂಡಿರೋ ಈ ಸಿನಿಮಾ ಖದರ್ ಎಂಥಾದ್ದೆಂಬುದು ಇತ್ತೀಚೆಗಷ್ಟೇ ಲಾಂಚ್ ಆಗಿರುವ ಟೀಸರ್ ಮೂಲಕವೇ ಜಾಹೀರಾಗಿದೆ. ಅದು ಮೂಡಿ ಬಂದಿರೋ ರೀತಿ, ಅದರಲ್ಲಿ ಮಿರುಗುವ ತಾಜಾತನ ಮತ್ತು ಹೊಸತನದ ಅನುಭೂತಿಗಳೇ ಪ್ರೇಕ್ಷಕರನ್ನೆಲ್ಲ ಮೋಡಿಗೀಡು ಮಾಡಿವೆ. ಈ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಂಥಾ ಪಾತ್ರದಲ್ಲಿ ತುಳು ಚಿತ್ರರಂಗದ ಸ್ಟಾರ್ ಹಾಸ್ಯ ನಟ ಅರವಿಂದ ಬೋಳಾರ್ ನಟಿಸಿದ್ದಾರಂತೆ.

ನಿರ್ದೇಶಕ ವಿಲೋಕ್ ಶೆಟ್ಟಿರಡು ವರ್ಷಗಳ ಕಾಲ ಶ್ರಮ ವಹಿಸಿ ನಿರ್ದೇಶನ ಮಾಡಿರುವ ಚಿತ್ರವಿದು. ಇದರಲ್ಲಿನ ಪ್ರತೀ ಪಾತ್ರಗಳನ್ನೂ ಅವರು ಪ್ರೇಕ್ಷಕರನ್ನೆಲ್ಲ ಕಾಡುವಂತೆ, ನೆನಪಲ್ಲುಳಿಯುವಂತೆ ರೂಪಿಸಿದ್ದಾರಂತೆ. ಅದರಂತೆಯೇ ಅರವಿಂದ ಬೋಳಾರ್‌ಗಾಗಿ ವಿಶೇಷವಾದ ಪಾತ್ರವನ್ನೇ ಸೃಷ್ಟಿಸಿದ್ದಾರೆ. ಅದು ರೋಬೋ ೨.೦ದಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದ ಪಕ್ಷಿರಾಜನಂಥಾ ಪಾತ್ರ. ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಂಥಾ ಈ ಪಾತ್ರದಲ್ಲಿ ಅರವಿಂದ ಬೋಳಾರ್ ಚೆಂದಗೆ ನಟಿಸಿದ್ದಾರಂತೆ. ಇದು ಚೇಜ಼್ ಕಥೆಯ ತೀವ್ರತೆಗೆ ನಗುವಿನ ಸ್ಪರ್ಶ ನೀಡುವಂತಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದಲ್ಲಿ ತರಬೇತಿ ಹೊಂದಿದ ಶ್ವಾನವೂ ಮುಖ್ಯ ಆಕರ್ಷಣೆಯಾಗಿದೆ. ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಶೆಟ್ಟಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿದ್ದಾರೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್‌ನಲ್ಲಿ ಅಡಿಯಲ್ಲಿ ಚೇಸ್ ಚಿತ್ರ ನಿರ್ಮಾಣಗೊಂಡಿದೆ. ಮಂಗಳೂರಿನವರೇ ಆದ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರಾಗಿ, ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರ ಶೀಘ್ರದಲ್ಲಿಯೇ ತೆರೆಗಾಣಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು