ಮಂಗಳೂರು, ಡಿಸೆಂಬರ್ 16: ವೈನ್ ಶಾಪ್, ಬಾರ್ ಗಳಿಗೆ ದೇವರ ಹೆಸರಿನ ನಾಮಫಲಕಗಳಿದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಳ್ತಂಗಡಿ ತಾಲ್ಲೂಕಿನ ಆಳದಂಗಡಿಯ ಸುಂಕದಕಟ್ಟೆ ಮಹಗಣಪತಿ ದೇವಸ್ಥಾನದಲ್ಲಿ ಭಾನುವಾರ ಮಾತನಾಡಿದ ಅವರು, ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.
ತಣ್ಣಗಾಗದ ಕಟೀಲು ಮೇಳದ ಯಕ್ಷಗಾನ ವಿವಾದ; ಆಣೆ ಪ್ರಮಾಣದತ್ತ ಎರಡು ಬಣ
ದೇವಸ್ಥಾನಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ರಾಜ್ಯದಲ್ಲಿ ದೇವರ ಹೆಸರಿನಲ್ಲಿರುವ ಬಾರ್ ಮತ್ತು ವೈನ್ ಶಾಪ್ ಗಳ ನಾಮಫಲಕವನ್ನು ಶೀಘ್ರವೇ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಚರ್ಚೆಯ ಮೂಲಕ ತೀರ್ಮಾನ ಕೈಗೊಳ್ಳಲು ಸಾಧ್ಯ, ಅಮತೋಲನ ಆಡಳಿತ ನಡೆಸಿದರೆ ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಚಿತ್ರಗಳು; ಕಣ್ಮನ ತುಂಬಿತು ಧರ್ಮಸ್ಥಳದ ಲಕ್ಷ ದೀಪೋತ್ಸವ
ಆಳದಮಗಡಿಯ ಮಹಾಗಣಪತಿ ದೇವಸ್ಥಾನ ಸುಂದರವಾಗಿ ನಿರ್ಮಾಣವಾಗುತ್ತಿದೆ, ಇದಕ್ಕೆ ಹತ್ತು ದಿವಸಗಳಲ್ಲಿ ಇಲಾಖೆಯಿಂದ ಗರಿಷ್ಠ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಾ ಭರವಸೆ ನೀಡಿದ್ದಾರೆ.