Friday, January 24, 2025
ಸುದ್ದಿ

ಡಿ.29ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರ್ಯ ಬಾರ್ಯ ಜಾತ್ರಾ ಗದ್ದೆಯಲ್ಲಿ ನಡೆಯಲಿರುವ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ -ಕಹಳೆ ನ್ಯೂಸ್

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುರ್ಯ ಬಾರ್ಯ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಜಾತ್ರಾ ಮಹೋತ್ಸವದ ಪ್ರಯುಕ್ತ ಡಿ29 ರಂದು ಮಹಲಿಂಗೇಶ್ವರ ಕ್ರೀಡಾಕೂಟ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ನಡೆಯಲಿದೆ.

ಡಿ.29 ರಂದು ಬೆಳಿಗ್ಗೆ ಸಾರ್ವಜನಿಕ ಹಿಂದೂ ಬಾಂಧವರಿಗೆ ಹಳ್ಳಿ ಸೊಗಡಿನ ಜಾನಪದ ಕ್ರೀಡಾಕೂಟ ಹಾಗೂ ರಾತ್ರಿ ದಿವಂಗತ ರಾಜೀವ ರೈ ಮತ್ತು ಮಮತಾ ರಾಜೀವ ರೈ ಇವರ ಸ್ಮರಣಾರ್ಥ ಹಿಂದೂ ಬಾಂಧವರಿಗೆ ಪುರುಷರ ಹೊನಲು ಬೆಳಕಿನ 60 ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ. ಇನ್ನೂ ಕಬಡ್ಡಿ ಪಂದ್ಯಾಟ ಪ್ರಥಮ ಬಹುಮಾನವಾಗಿ 7,777 ಹಾಗೂ ಮಹಾಲಿಂಗೇಶ್ವರ ಟ್ರೋಫಿ, ದ್ವೀತಿಯ ಬಹುಮಾನವಾಗಿ 4,444 ಹಾಗೂ ಮಹಾಲಿಂಗೇಶ್ವರ ಟ್ರೋಫಿ, ತೃತೀಯ ಬಹುಮಾನವಾಗಿ 2,222 ಹಾಗೂ ಮಹಾಲಿಂಗೇಶ್ವರ ಟ್ರೋಫಿ ಹಾಗೂ ಚತುರ್ಥ ಬಹುಮಾನವಾಗಿ 1,777 ಹಾಗೂ ಮಹಾಲಿಂಗೇಶ್ವರ ಟ್ರೋಫಿ ನೀಡಲಾಗುವುದು. ಉತ್ತಮ ರೈಡರ್, ಉತ್ತಮ ಕ್ಯಾಚರ್ ಹಾಗೂ ಸವ್ಯ ಸಾಚಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು