ಇತ್ತೀಚಿನ ದಿನದಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಅನೇಕರಲ್ಲಿ ಆತಂಕ ಸೃಷ್ಟಿಸಿದೆ.
ಇದೀಗ ತರಗತಿಯಲ್ಲಿರುವ ಸಹಪಾಠಿಗಳ ಬಗ್ಗೆ ಬಾಲಕರ ಗುಂಪು ಮಾತನಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಹೌದು, ಮುಂಬೈನ ಪ್ರತಿಷ್ಠಿತ ಐಬಿ ಶಾಲೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಒಂದರಲ್ಲಿ 8-10 ವಿದ್ಯಾರ್ಥಿಗಳ ಗುಂಪು ತಮ್ಮ ತರಗತಿಯಲ್ಲಿರುವ ವಿದ್ಯಾರ್ಥಿನಿಯರನ್ನು ರೇಪ್ ಮಾಡಬೇಕೆಂದು ಮಾತನಾಡಿಕೊಂಡಿದ್ದಾರೆ.
ಇದರೊಂದಿಗೆ ಗ್ಯಾಂಗ್ ಬ್ಯಾಂಗ್, ಗುಂಪು ಸೆಕ್ಸ್, ಸಲಿಂಗ ಕಾಮದ ಬಗ್ಗೆ ಮಾತನಾಡಿಕೊಂಡಿದ್ದು, ಕೆಲ ಪೋಷಕರಿಂದ ಮಾಹಿತಿ ಬಹಿರಂಗವಾಗಿದೆ.
ಇದರಲ್ಲಿ 13-14 ವರ್ಷದ ಬಾಲಕರು ಈ ರೀತಿ ಚಾಟ್ ಮಾಡಿದ್ದು, ಇದರಲ್ಲಿ ಒಬ್ಬ ಬಾಲಕ ಬಾಲಕಿಯೊಬ್ಬಳನ್ನು ಒಂದು ರಾತ್ರಿ ಅನುಭವಿಸಬೇಕು ಎಂದು ಹೇಳಿದ್ದಾನೆ. ಈ ರೀತಿ ಚಾಟ್ ಮಾಡಿರುವುದನ್ನು ಕೆಲ ಪೋಷಕರು ಗಮನಿಸಿ, ಅದನ್ನು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡದಿದ್ದರೂ, ಅವರನ್ನು ಶಾಲೆಯಿಂದ ಸಸ್ಪೆಂಡ್ ಮಾಡಿದೆ ಎನ್ನಲಾಗಿದೆ.