Thursday, January 23, 2025
ಸುದ್ದಿ

ವೇಗವಾಗಿ ಬೈಕ್ ಓಡಿಸುತ್ತಿದ್ದವರನ್ನು ನಿಲ್ಲಿಸಿ ಸಲಹೆ ನೀಡಿದ ಕಿಚ್ಚ ಸುದೀಪ್-ಕಹಳೆ ನ್ಯೂಸ್

ಓಡಾಡಲು ಬೈಕು, ಟ್ಯಾಂಕು ತುಂಬಾ ಪೆಟ್ರೋಲು ಇದ್ದರೆ ಸಾಕು… ಯುವಕರಿಗೆ ಸ್ವರ್ಗವೇ ಧರೆಗೆ ಇಳಿದಂತೆ. ಬಿಸಿರಕ್ತದ ಯುವಕರಿಗೆ ಸ್ಪೀಡಾಗಿ ಬೈಕ್ ಓಡಿಸುವುದು ಒಂದು ಚಾಳಿ. ವಾಹನ ಓಡಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ, ಸ್ಪೀಡ್ ಬಗ್ಗೆ ನಿಯಂತ್ರಣ ಇರಲಿ ಅಂತ ಎಷ್ಟೇ ಅರಿವು ಮೂಡಿಸಿದರೂ ಕೆಲವರು ಮಾತ್ರ ವೇಗವಾಗಿ ವಾಹನ ಚಲಿಸುವುದನ್ನು ಬಿಡಲ್ಲ.

ಮೊನ್ನೆ ಕಿಚ್ಚ ಸುದೀಪ್ ಮುಂದೆ ಆಗಿದ್ದೂ ಇದೆ. ಸ್ಪೀಡ್ ಆಗಿ ಬೈಕ್ ಓಡಿಸುತ್ತಿದ್ದವರನ್ನು ಕಂಡು ಗಾಬರಿ ಆದ ಸುದೀಪ್, ಅವರನ್ನು ನಿಲ್ಲಿಸಿ ”ಏನ್ರೀ ಇಷ್ಟು ವೇಗವಾಗಿ ಬರ್ತಿದ್ದೀರಾ” ಅಂತ ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಬೈಕ್ ಓಡಿಸುತ್ತಿದ್ದವರು ”ಸಾರಿ ಸಾರ್” ಅಂತ ಹೇಳಿ ಸ್ಪೀಡ್ ನ ಕಂಟ್ರೋಲ್ ಮಾಡಿಕೊಂಡು ತೆರಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್ ಬುಕ್ ಗೆ ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ದ್ವಿಚಕ್ರ ವಾಹನ ಸವಾರರಿಗೆ ಸುದೀಪ್ ”ನಿಧಾನವಾಗಿ ಚಲಿಸಿ” ಅಂತ ಸಲಹೆ ಕೊಟ್ಟಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ”ನಿನ್ನೆ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದವರನ್ನು ನಿಲ್ಲಿಸಿ, ನಿಧಾನವಾಗಿ ಚಲಿಸಲು ಹೇಳಿ ಸ್ವೀಟಾಗಿ ವಾರ್ನಿಂಗ್ ಮಾಡಿದ ನಮ್ಮ ಅಭಿನಯ ಚಕ್ರವರ್ತಿ ಸುದೀಪ್ ಅಣ್ಣ. ಈ ನಿಮ್ಮ ಪ್ರೀತಿಗೆ ಸದಾ ಚಿರಋಣಿ” ಅಂತ ಬರೆದುಕೊಂಡು ಕಿಚ್ಚನ ಅಭಿಮಾನಿಗಳು ವಿಡಿಯೋನ ಹಂಚಿಕೊಳ್ಳುತ್ತಿದ್ದಾರೆ.

ಸುದೀಪ್ ತಮ್ಮ ಹೆಸರಿನ ಮುಂದೆ ‘ಸ್ಟಾರ್’ ಬಿರುದು ಸೇರಿಸಿಲ್ಲ ಯಾಕೆ ಗೊತ್ತಾ

ತೆರೆಮೇಲೆ ಹೀರೋ ಆಗಿರುವವರಿಗೆ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ತುಂಬಾ ಮುಖ್ಯ. ಸುದೀಪ್ ಗೆ ಆ ಬದ್ಧತೆ, ಜವಾಬ್ದಾರಿ ಇದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.?