ಶ್ರೀಗೋಪಾಲಕೃಷ್ಣ ಯುವಕ ಮಂಡಲದ ಅಧ್ಯಕ್ಷರ ವಿವಾಹವನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಣೆ ಮಾಡಿದ ಯುವ ತಂಡ.-ಕಹಳೆ ನ್ಯೂಸ್
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಶ್ರೀ ಗೋಪಾಲ ಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ಸೋಮಶೇಖರ್ ಇವರ ವಿವಾಹ ಸಮಾರಂಭವನ್ನು ಸವಿ ನೆನಪಿಗಾಗಿ ವಿಭಿನ್ನವಾಗಿ ಆಚರಿಸಲು ಆಲೋಚಿಸಿದ ಎಲ್ಲಾ ಸದಸ್ಯರು ಕಷ್ಟದಲ್ಲಿದ್ದ ಕುಟುಂಬ ಒಂದಕ್ಕೆ ನೆರವಾಗುವ ಮೂಲಕ ಭಿನ್ನ ರೀತಿಯ ಕಾರ್ಯಮಾಡಿದರು.
ಬೆಳ್ತಂಗಡಿ ತಾಲೂಕಿನ ಪುತಿಲ ಗ್ರಾಮದ ನೆಲ್ಲಿಪಲ್ಕೆ ವಿಶ್ವನಾಥ ದಂಪತಿಗಳು ಆರ್ಥಿಕ ವಾಗಿ ಹಿಂದುಳಿದವರಾಗಿದ್ದು .ತೀರಾ ಕಷ್ದವಾಗಿದ್ದ ಸಮಯದಲ್ಲೆ ವಿಶ್ವನಾಥರ ಪತ್ನಿ ಸರಸ್ವತಿಯವರು ಮಾರಕ ರೋಗ ಕ್ಕೆ ತುತ್ತಾಗಿ ಬಳಲುತ್ತಿರುವುದನ್ನ ಮನಗಂಡ ಯುವಕ ಮಂಡಲದ ಸದಸ್ಯರು ತಮ್ಮ ಒಂದೆರೆಡು ದಿನದ ದುಡಿತದ ಹಣಒಟ್ಟು ಸೇರಿಸಿ ವಿಶ್ವನಾಥ ದಂಪಗಳಿಗೆ 16500 ರೂಪಾಯಿಗಳನ್ನು ಯುವಕಮಂಡಲದ ಅಧ್ಯಕ್ಷರಾದ ಸೋಮಶೇಖರ್ ಸದಸ್ಯರೆಲ್ಲರ ಉಪಸ್ಥಿತಿಯಲ್ಲಿ ನೀಡಿದರು.