ನಿಶ್ಚಿತಾರ್ಥವಾಗಿ ಎರಡು ತಿಂಗಳ ನಂತ್ರ ಭಾವಿ ಪತ್ನಿಗೆ ಎಲೆಕ್ಟ್ರಿಕಲ್ ಶಾಕ್ ಹೊಡದಿತ್ತು. ಇದ್ರಿಂದ ಯುವತಿಯ ಎರಡು ಕಾಲು, ಕೈ ಕತ್ತರಿಸಬೇಕಾಯ್ತು. ಇಷ್ಟಾದ್ರೂ ಆಕೆಯನ್ನೇ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ ಭಾವಿ ಪತಿ ಆರು ತಿಂಗಳು ಆಕೆ ಜೊತೆ ಆಸ್ಪತ್ರೆಯಲ್ಲಿದ್ದ. ಆದ್ರೆ ಯುವತಿ ಬದುಕಿ ಬರಲಿಲ್ಲ. ಯುವತಿ ಶವಕ್ಕೆ ವಧುವಿನಂತೆ ಸಿಂಗಾರ ಮಾಡಿ ಅಂತ್ಯಸಂಸ್ಕಾರ ಮಾಡಲಾಯ್ತು.
ಕಣ್ಣೀರಿನ ಪ್ರೇಮ ಕಥೆ ನಡೆದಿರುವುದು ಗುಜರಾತಿನ ಜಾಮ್ ನಗರದಲ್ಲಿ. ಚಿರಾಗ್ ಮತ್ತು ಹಿರಲ್ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬುಧವಾರ ಹಿರಲ್ ಗೆ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಈಗಾಗಲೇ ಆರು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಿರಲ್ ಮಂಗಳವಾರ ಕೊನೆಯುಸಿರೆಳೆದ್ಲು.
ಕೈ, ಕಾಲು ಕಳೆದುಕೊಂಡಿದ್ರೂ ಹಿರಲ್ ಮೇಲೆ ಚಿರಾಗ್ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಕಾಲ ಹಿರಲ್ ಆರೈಕೆ ಮಾಡಿದ್ದ ಚಿರಾಗ್ ಸಾಕಷ್ಟು ಪ್ರೀತಿ ನೀಡಿದ್ದ. ಇಬ್ಬರು ಒಂದಾಗಿ ಬಾಳುವ ಕನಸು ಕಂಡಿದ್ದರು. ಆದ್ರೆ ಹಿರಲ್ ಸಾವು ಚಿರಾಗ್ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಚಿರಾಗ್ ನೋವು ಆಸ್ಪತ್ರೆ ಸಿಬ್ಬಂದಿ ಕಣ್ಣಲ್ಲೂ ನೀರು ತರಿಸಿತ್ತು.