ಹೈದ್ರಾಬಾದ್ ರಾಜಧಾನಿ ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಆರೋಪಿಗಳ ಶವಗಳನ್ನು ಇನ್ನೂ ಆಸ್ಪತ್ರೆಯಲ್ಲಿ ಇಡಲಾಗಿದೆ.
ಎನ್‌ಕೌಂಟರ್ ನಡೆದು 14 ದಿನಗಳ ನಂತರವೂ ಮೃತ ದೇಹಗಳ ತನಿಖೆ ಪೂರ್ಣಗೊಂಡಿಲ್ಲ. ಇದ್ರಿಂದ ಶವ ಹಾಳಾಗುವ ಅಪಾಯ ಹೆಚ್ಚಾಗಿದೆ. ಈಗ ಆಸ್ಪತ್ರೆ ಆಡಳಿತ ಮಂಡಳಿ ಹೈಕೋರ್ಟ್‌ಗೆ ನಿರ್ದೇಶ ನೀಡುವಂತೆ ಅರ್ಜಿ ಸಲ್ಲಿಸಿದೆ.
ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಪ್ರಕಾರ ಶವಗಳನ್ನು ಹೆಚ್ಚು ಕಾಲ ಸುರಕ್ಷಿತವಾಗಿಡುವುದು ಕಷ್ಟ. ಮೃತ ದೇಹಗಳ ಬಗ್ಗೆ ಆದಷ್ಟು ಬೇಗ ಸೂಚನೆಗಳನ್ನು ನೀಡಬೇಕೆಂದು ಆಸ್ಪತ್ರೆ ಆಡಳಿತ ನ್ಯಾಯಾಲಯಕ್ಕೆ ಒತ್ತಾಯಿಸಿದೆ.
ಸದ್ಯ ಮೃತದೇಹ ಸರಿಯಾಗಿದೆ. ಆದ್ರೆ ಎಷ್ಟು ಕಾಲ ಮೃತದೇಹವನ್ನು ಹೀಗೆ ಇಡಬೇಕೆಂಬ ಸೂಚನೆ ಸಿಕ್ಕಿದ್ರೆ ಅದಕ್ಕೆ ಸರಿಯಾದ ಕ್ರಮಕೈಗೊಳ್ಳಬಹುದು ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.
ಎನ್ ಕೌಂಟರ್ ನಂತ್ರ ನಾಲ್ವರು ಆರೋಪಿಗಳ ಸಾವಿನ ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ತನಿಖಾ ಆಯೋಗವನ್ನು ಸ್ಥಾಪಿಸಿದೆ. ಎನ್ ಕೌಂಟರ್ ಸತ್ಯಾಸತ್ಯತೆ ಬಗ್ಗೆ ತನಿಖಾ ತಂಡ ತನಿಖೆ ನಡೆಸುತ್ತಿದೆ.