Wednesday, January 22, 2025
ಸುದ್ದಿ

ಮುಳಿಯ ಜ್ಯುವೆಲ್ಲರಿ ಮಳಿಗೆಯಲ್ಲಿ ಬೆಂಕಿ – ಸಂರಕ್ಷಣೆ ಮಾಹಿತಿ ಕಾರ್ಯಾಗಾರ-ಕಹಳೆ ನ್ಯೂಸ್

ಪುತ್ತೂರಿನ ಹೆಸರಾಂತ ಜ್ಯುವೆಲ್ಲರಿಯಾದ ಮುಳಿಯ ಜ್ಯುವೆಲ್ಲರಿ ಮಳಿಗೆಯಲ್ಲಿ ಬೆಂಕಿ ಸಂರಕ್ಷಣೆ ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕತೆಯನ್ನು ನಡೆಸಲಾಯಿತು. Malsi Tech – Fire safety solution ನ ಶ್ರೀ ನವೀನ್ ಶೆಣೈಯವರು ಮಾಹಿತಿ ತಿಳಿಸಿದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗವನ್ನು ಒಟ್ಟು 3 ತಂಡಗಳನ್ನಾಗಿಸಿ ಎಲ್ಲರಿಗೂ ಇದರ ಮಾಹಿತಿ ಕೊಡಲಾಯಿತು.
ಬೆಂಕಿ ಅವಘಡದ ಸಾಧ್ಯತೆಗೆ ಕಾರಣಗಳೇನು? ಅದು ದೊಡ್ಡ ಮಟ್ಟಕ್ಕೆ ಹೋಗದಂತೆ ಏನೆಲ್ಲಾ ಮಾಡಬಹುದು? ಯಾವ ಮಾದರಿಯ ಬೆಂಕಿಗೆ ಯಾವ estinguisher ನ್ನು ಬಳಸಬೇಕು, ಬಳಸುವ ಕ್ರಮ, ಬೆಂಕಿ ಅವಘಡವಾದಲ್ಲಿ ಯಾವ ರೀತಿ roll call ಮಾಡಬೇಕು ಮತ್ತುestinguisher ಬಳಕೆಯ ಪ್ರಾತ್ಯಕ್ಷಿಕತೆಯನ್ನು ತಿಳಿಸಲಾಯಿತು.
ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ಅವರು ಅವಘಡಗಳು ಹೇಳಿ ಬರುವುದಿಲ್ಲ. ಅವಘಡವಾದಲ್ಲಿ ನಾವು ಯಾವ ರೀತಿ ಅದನ್ನು ಎದುರಿಸಬೇಕು ಎಂಬುದನ್ನು ತಿಳಿದುಕೊಂಡಿರುವುದು ಅತ್ಯಗತ್ಯ ಎಂದರು.
ಸಂಸ್ಥೆಯ ಚೇರ್‍ಮೇನ್‍ರಾದ ಶ್ರೀ ಕೇಶವ ಪ್ರಸಾದ್ ಅವರು ಮಾತನಾಡಿ ಅವಘಡವಾದಲ್ಲಿ ನಾವು ಮಾನಸಿಕವಾಗಿ ಕುಗ್ಗದೆ, ನಮ್ಮನ್ನು ನಾವು ಹೇಗೆ ಸಂರಕ್ಷಿಸುವುದು, ನಮ್ಮೊಂದಿಗಿರುವವರನ್ನು ಹೇಗೆ ರಕ್ಷಿಸುವುದು ಮತ್ತು ಅದನ್ನು ಮಾಡಬೇಕಾದಲ್ಲಿ ನಮಗೆ ಬೇಕಾಗುವ ಜ್ಞಾನವನ್ನು ಈ ಮಾಹಿತಿ ಕಾರ್ಯಾಗಾರದಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು.
ಸಂಸ್ಥೆಯ ಸುದರ್ಶನ್ ಎಮ್ ಸ್ವಾಗತಿಸಿದರು, ಲೋಕೇಶ್ ಎಮ್.ಎಸ್ ನಿರೂಪಿಸಿದರು ಹಾಗೂ ಶ್ಯಾಮ ಮೂರ್ತಿಯವರು ವಂದಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು