Wednesday, January 22, 2025
ಸುದ್ದಿ

ಬ್ರೇಕಿಂಗ್ : ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ‘ಸರ್ಕಾರಿ ಬಸ್ ಸಂಚಾರ’ ಸೇವೆ ಬಂದ್-ಕಹಳೆ ನ್ಯೂಸ್

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆ ನಿನ್ನೆ ನಗರದಲ್ಲಿ ನಡೆದ ಪ್ರತಿಭಟನೆಯಿಂದಾಗಿ ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದರು. ಹೀಗಾಗಿ ಇಂದು ನಗರಾಧ್ಯಂತ ಕರ್ಪ್ಯೂ ವಿಧಿಸಲಾಗಿದೆ. ಈ ಮಧ್ಯೆ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನಲ್ಲಿ ಸರ್ಕಾರಿ ಬಸ್ ಸಂಚಾರ ಸೇವೆಯನ್ನು ಬಂದ್ ಮಾಡಲಾಗಿದೆ.

ಕಳೆದ ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಎರಡು ಬಸ್ ಗಳ ಗಾಜುಗಳು ಪುಡಿ ಪುಡಿಯಾಗಿದ್ದರು. ಅಲ್ಲದೇ ಗುರುವಾರ ರಾತ್ರಿ ಮಂಗಳೂರಿನಲ್ಲಿ ಒತ್ತಡದ ಪರಿಸ್ಥಿತಿ ಇದ್ದು ಕರ್ಫ್ಯೂ ಹೇರಲಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಒಂದು ವೋಲ್ವೊ ಬಸ್ ಗೆ ಕಲ್ಲೆಸೆಯಲಾಗಿತ್ತು. ಈ ಮಧ್ಯೆಯೂ ಪ್ರಯಾಣಿಕರ ಹಿತದೃಷ್ಠಿಯಿಂದ ಬೆಂಗಳೂರಿನಿಂದ ಮಂಗಳೂರಿಗೆ ಭದ್ರತೆಯಲ್ಲಿ ಸಂಚಾರವನ್ನು ಕೆ ಎಸ್ ಆರ್ ಟಿ ಸಿ ಮುಂದುವರೆಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೇ ಇಂದು ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ಡಿಪೋ 1, 2 ಮತ್ತು 3ರ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರ ಹಾಗೂ ಬಸ್ ಸುರಕ್ಷತೆಗಾಗಿ ಕ್ರಮ ಕೈಗೊಂಡಿದೆ. ಹೀಗಾಗಿ ಮಂಗಳೂರಿನ ಡಿಪೋ 1, 2 ಹಾಗೂ 3 ಸರ್ಕಾರಿ ಬಸ್ ಸೇವೆ ಇಂದು ಬಂದ್ ಆಗಿರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೇ ಕಳೆದ ರಾತ್ರಿ ಕೆ ಎಸ್ ಆರ್ ಟಿ ಸಿ ಪ್ರಕ್ಷುಬ್ಧ ಪರಿಸ್ಥಿತಿ, ಬಿಗಿ ವಾತಾವರಣದ ನಡುವೆಯೂ ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಸೇವೆಯನ್ನು ಒದಗಿಸಿದೆ. ಹೀಗೆ ಬರುವಾಗ ಬಸ್ ಮೇಲೆ ಕಲ್ಲು ತೂರಾಟ ಕೂಡ ನಡೆಸಲಾಗಿದೆ. ಈ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುನ್ನೆಚ್ಚರಿಕೆ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದ್ದಕ್ಕಾಗಿ ಪ್ರಯಾಣಿಕರೊಬ್ಬರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರೋದು ಈ ಕೆಳಗಿನಂತೆ..

ಗುರುವಾರ ರಾತ್ರಿ ಮಂಗಳೂರಿನಲ್ಲಿ ಒತ್ತಡದ ಪರಿಸ್ಥಿತಿ ಇದ್ದು ಕರ್ಫ್ಯೂ ಹೇರಲಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಒಂದು ವೋಲ್ವೊ ಬಸ್ ಗೆ ಕಲ್ಲೆಸೆಯಲಾಗಿತ್ತು. ಆದರೂ ನೂರಾರು ಪ್ರಯಾಣಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಬಸ್ ಸಂಚಾರ ಮುಂದುವರಿಸಿದ ಕೆಎಸ್ ಆರ್ ಟಿಸಿ ಕ್ರಮ ಅಭಿನಂದನೀಯ. ಬೆಂಗಳೂರಿಗೆ ಹೊರಡುವ ಎಲ್ಲ ಬಸ್‌ಗಳು ಭದ್ರತೆಯೊಡನೆ ಏಕಕಾಲಕ್ಕೆ ನಿರ್ಗಮಿಸಿದ ಕಾರಣ ಪ್ರಯಾಣಿಕರಲ್ಲೂ ವಿಶ್ವಾಸ ಮೂಡಿತು. ಮಂಗಳೂರಿಗೆ ತರಬೇತಿಗೆಂದು ಬಂದಿದ್ದ ಕೆಲವು ಪೊಲೀಸ್ ಅಧಿಕಾರಿಗಳೂ ಬಸ್ ನಲ್ಲಿದ್ದರು.

ನಿಲ್ದಾಣದಲ್ಲಿ ಹಾಜರಿದ್ದು ಸಿಬ್ಬಂದಿ ಜೊತೆ ಚರ್ಚಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಕೂಡ ಬಸ್ ಹೊರಡುವವರೆಗೆ ಇದ್ದು ಸಲಹೆ ಕೊಡುತ್ತಿದ್ದುದ್ದು ಉಳಿದವರ ಮನೋಬಲ ಹೆಚ್ಚಿಸಿತು. ಅಪಾಯದ ಸನ್ನಿವೇಶದಲ್ಲಿ ಸಮಯಸ್ಫೂರ್ತಿ ತೋರಿದ ಕಾರ್ಯನಿರ್ವಹಣೆ ಮೆಚ್ಚುಗೆಗೆ ಅರ್ಹ