Tuesday, January 21, 2025
ಸುದ್ದಿ

ಮಂಗಳೂರಿನಲ್ಲಿದ್ದವರು ನೈಜ ‘ಪತ್ರಕರ್ತ’ರು-ಕಹಳೆ ನ್ಯೂಸ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಅಲ್ಲಿನ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದ್ದು ಕರ್ಫ್ಯೂ ಜಾರಿಗೊಳಿಸಲಾಗಿದೆ.

ಇದರ ಮಧ್ಯೆ 50 ಮಂದಿಯ ತಂಡವೊಂದು ಪತ್ರಕರ್ತರ ವೇಷದಲ್ಲಿ ಮಂಗಳೂರಿಗೆ ಬಂದಿದ್ದಾರೆಂಬ ವದಂತಿ ಹರಡಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಇವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಪೊಲೀಸರ ವಿಚಾರಣೆ ವೇಳೆ ಅವರುಗಳು ಕೇರಳದ ಪತ್ರಕರ್ತರೆಂಬ ಸಂಗತಿ ತಿಳಿದುಬಂದಿದೆ. ಆದರೆ ಅವರುಗಳ ಬಳಿ ಸರ್ಕಾರ ನೀಡಿರುವ ಗುರುತಿನ ಪತ್ರ ಇಲ್ಲದಿರುವ ಕಾರಣ ಮಂಗಳೂರು ಪೊಲೀಸರು ವಾಪಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು