Monday, January 20, 2025
ಸುದ್ದಿ

ಪತಿ ಬಿಟ್ಮೇಲೆ ಪ್ರೀತಿಯಾಟ ಶುರು ಮಾಡಿದ್ದ CRPF ಯೋಧನ ಪತ್ನಿಗೆ ಆಗಿದ್ದೇನು-ಕಹಳೆ ನ್ಯೂಸ್

ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿ ಮನೆಯಿಂದ ಹೊರಹಾಕಲ್ಪಟ್ಟಿದ್ದ ಸಿಆರ್ಪಿಎಫ್ ಯೋಧನ ಪತ್ನಿಗೆ ಅಕ್ರಮ ಸಂಬಂಧ ಮುಳುವಾಗಿದೆ. ಪತಿಯಿಂದ ದೂರವಾದ ಮಹಿಳೆ ಬಸ್ ಚಾಲಕನ ಪ್ರೀತಿಗೆ ಬಿದ್ದಿದ್ದಳು. ನಂತ್ರ ಕಚೇರಿ ಸಹ ಸಿಬ್ಬಂದಿ ಪ್ರೀತಿ ಮಾಡಲು ಶುರು ಮಾಡಿದ್ದಳು. ಆದ್ರೆ ಬಸ್ ಚಾಲಕ ಆಕೆ ಇಹಲೋಕ ತ್ಯಜಿಸುವಂತೆ ಮಾಡಿದ್ದಾನೆ.

ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸಿಆರ್ಪಿಎಫ್ ಯೋಧನ ಪತ್ನಿ ಆರಾಧನಾ ಪತಿಯ ಹಿಂಸೆ ತಾಳಲಾರದೆ ತಾಯಿ ಮನೆಯಲ್ಲಿ ವಾಸವಾಗಿದ್ದಳು. ಕಚೇರಿಗೆ ಬಸ್ ನಲ್ಲಿ ಹೋಗ್ತಿದ್ದ ಆರಾಧನಾ ಬಸ್ ಚಾಲಕನ ಸ್ನೇಹ ಬೆಳೆಸಿದ್ದಾಳೆ. ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಈ ಮಧ್ಯೆ ಬಸ್ ಚಾಲಕನಿಗ ಅಪಘಾತವಾಗಿ ಮನೆಯಲ್ಲಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆರಾಧನಾ ಕಣ್ಣು ಕಚೇರಿ ಸಹ ಸಿಬ್ಬಂದಿ ಮೇಲೆ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಹ ಸಿಬ್ಬಂದಿ ಪ್ರೀತಿ ಮಾಡಲು ಶುರು ಮಾಡಿದ್ದ ಆರಾಧನಾ, ಬಸ್ ಚಾಲಕನ ಮದುವೆ ನಿವೇದನೆಯನ್ನು ತಿರಸ್ಕರಿಸಿದ್ದಾಳೆ. ಇದ್ರಿಂದ ಕೋಪಗೊಂಡ ಚಾಲಕ ನಿರ್ಜನ ಪ್ರದೇಶಕ್ಕೆ ಆರಾಧನಾಳನ್ನು ಕರೆದೊಯ್ದು ಹತ್ಯೆಗೈದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು