Monday, January 20, 2025
ಸುದ್ದಿ

ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ – ಕಹಳೆ ನ್ಯೂಸ್

ಉಡುಪಿ, ಡಿ 20 : ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ಏರುಪೇರಾಗಿದ್ದು, ಶ್ರೀಗಳ ಆರೋಗ್ಯ ವಿಚಾರಿಸಲು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಸ್ಪತ್ರೆಗೆ ಭೇಟಿ ನೀಡಿದ್ಧಾರೆ.

ಶ್ರೀಗಳ ಆರೋಗ್ಯ ವಿಚಾರಿಸಿ ಮಾಧ್ಯಮದ ಜೊತೆ ಮಾತನಾಡಿದ ಅವರು, ‘ಪೇಜಾವರ ಶ್ರೀಗಳು ಭಾರತಕ್ಕೆ ಬೇಕಾದವರು, ರಾಮಮಂದಿರದ ನಿರ್ಮಾಣವನ್ನು ನೋಡಲು ಶ್ರೀಗಳು ಬೇಕು, ಆದರೆ, ದೇವರಿಗೂ ಅವರು ಬೇಕಾಗಿದ್ದಾರೇನೊ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಪೇಜಾವರ ಶ್ರೀಗಳಿಗೆ ನಮ್ಮ ರಾಷ್ಟ್ರದ ಬಗ್ಗೆ ತುಂಬಾ ಗೌರವವಿದೆ, ಅವರು ಮಹಾನ್ ಚಿಂತಕರು, ಅವರ ಅಗತ್ಯ ನಮಗೆ ತುಂಬಾನೇ ಇದೆ. ಅವರು ಕೇವಲ ಸನ್ಯಾಸಿಯಲ್ಲ, ರಾಮಮಂದಿರದ ಹೋರಾಟದ ಸಮಯದಲ್ಲೂ ಮೊದಲಿಗರಾಗಿದ್ದರು’ ಅವರು ಬೇಗನೇ ಆರೋಗ್ಯವಂತರಾಗಲಿ ಎಂದು ಹಾರೈಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಶ್ರೀಗಳ ಆರೋಗ್ಯವನ್ನು ವಿಚಾರಿಸಲು ರಾಜಕೀಯ ನಾಯಕರು, ಅಧಿಕಾರಿಗಳು, ಭಕ್ತರು ಭೇಟಿ ನೀಡುತ್ತಿದ್ದಾರೆ.