Recent Posts

Sunday, January 19, 2025
ರಾಜಕೀಯ

ಯು.ಟಿ.ಖಾದರ್ ಅವರ ಹೇಳಿಕೆಯೇ ಜಿಲ್ಲೆಯಲ್ಲಿ ಗಲಭೆಗೆ ಕಾರಣ ; ಕಡಬ ಪ್ರಖಂಡ ವಿ.ಹಿಂ.ಪ.ನಿಂದ ಯು.ಟಿ.ಖಾದರ್ ವಿರುದ್ದ ದೂರು – ಕಹಳೆ ನ್ಯೂಸ್

ಕಡಬ: ಕುಟೀಲ ರಾಜಕೀಯ ತಂತ್ರಗಾರಿಕೆಯಿಂದ ಕಾಂಗ್ರೆಸ್ ದೇಶದ ಮುಸ್ಲಿಂರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ, ಈ ನಡುವೆ ಶಾಸಕ ಯು.ಟಿ.ಖಾದರ್ ಅವರ ಹೇಳಿಕೆಯಿಂದ ಪ್ರೇರೆಪಿತವಾಗಿ ಗಲಭೆ ನಡೆಯುತ್ತಿದೆ, ಈ ಗಲಭೆಗೆ ಯು.ಟಿ.ಖಾದರ್ ಅವರೇ ಕಾರಣ, ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಡಬ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಯಿತು.

ಕಡಬ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ ದೂರು ನೀಡಿದ್ದು, ಯು.ಟಿ.ಖಾದರ್ ಅವರು ಜಿಲ್ಲಾಧಿಕಾರಿ ಕಛೇರಿ ಎದುರು ಮಾತನಾಡಿ ರಾಜ್ಯ ಹೊತ್ತಿ ಉರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅದರಂತೆ ಇದೀಗ ಜಿಲ್ಲೆಯಲ್ಲಿ ಗಲಾಬೆ ನಡೆದಿದೆ. ಸಾವು ನೋವುಗಳು ಸಂಭವಿಸಿದ್ದು ಇದಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಅವರ ಹೇಳಿಕೆಯೇ ಕಾರಣವಾಗಿದೆ, ಆದುದರಿಂದ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಈ ಸಂದರ್ಭದಲ್ಲಿ ವಿ.ಹಿಂ.ಪರಿಷದ್ ಕಡಬ ಪ್ರಖಂಡದ ಗೌರವಾಧ್ಯಕ್ಷ ಎ. ಜನಾರ್ದನ ರಾವ್, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನಂದುಗುರಿ, ಪ್ರಮುಖರಾದ ಸುರೇಶ್ ಕೋಟೆಗುಡ್ಡೆ, ಪುನಿತ್ ಗೌಡ ದೇಂತಾರು, ತಿಲಕ್ ಕಡಬ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು