Wednesday, January 22, 2025
ಸುದ್ದಿ

ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹೋಗ್ತಾರೆ ಈ ಜಿಲ್ಲೆಯ ಮಕ್ಕಳು-ಕಹಳೆ ನ್ಯೂಸ್

ಪೊಲೀಸ್ ಅಥವಾ ಪೊಲೀಸ್ ಠಾಣೆ ಎಂದರೆ ಮಕ್ಕಳಿಗೆ ಭಯ ಇದ್ದೇ ಇರುತ್ತದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಗುರುವಾರ ಬಂತಂದ್ರೆ ಸಾಕು ಪೊಲೀಸ್ ಠಾಣೆಗೆ ಮಕ್ಕಳು ಹೋಗ್ತಾರೆ.

ಜಿಲ್ಲೆಯಲ್ಲಿ 27 ಪೊಲೀಸ್ ಠಾಣೆಗಳಿದ್ದು, ಈ ಎಲ್ಲಾ ಠಾಣೆಯಲ್ಲೂ ಆಯಾಯ ಏರಿಯಾ ಮಕ್ಕಳು ಹೋಗ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ರಾಜ್ಯದಲ್ಲಿ ತೆರೆದ ಮನೆ ಯೋಜನೆ ಜಾರಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಗುರುವಾರ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಭೇಟಿ ನೀಡುತ್ತಾರೆ. ಕಡ್ಡಾಯವಾಗಿ ಬಾಗಲಕೋಟೆಯಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಬೇಕು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಆದೇಶ ಹೊರಡಿಸಿದ್ದಾರೆ.

ಈ ತೆರೆದ ಮನೆ ಉದ್ದೇಶ, ಪೊಲೀಸ್ ಇಲಾಖೆಯಲ್ಲಿ ಯಾವ ರೀತಿ ಕೆಲಸ ಕಾರ್ಯಗಳಾಗುತ್ತವೆ. ಪೊಲೀಸರು ಅಂದರೆ ಹೇಗೆ. ಪೊಲೀಸರು ಜನ ಸ್ನೇಹಿಯಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಮಕ್ಕಳ ಜೊತೆ ಬಾಂಧವ್ಯ ಬೆಳೆಯುತ್ತದೆ ಎಂಬ ನಿಟ್ಟಿನಲ್ಲಿ ತೆರೆದ ಮನೆ ಯೋಜನೆ ಜಾರಿಗೆ ತರಲಾಗಿದೆ.