Wednesday, January 22, 2025
ಸುದ್ದಿ

ಜನವರಿ 11 ರಂದು ನಡೆಯಲಿದೆ ಶ್ರೀ ವಿಷ್ಣು ಟ್ರೋಫಿ 2020 ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ – ಕಹಳೆ ನ್ಯೂಸ್

ಶ್ರೀ ವಿಷ್ಣು ಮೂರ್ತಿ ಫ್ರೆಂಡ್ಸ್ ಪೆರ್ನೆ ಕಳೆಂಜ ಬಿಳಿಯೂರ್ ಇದರ ಆಶ್ರಯದಲ್ಲಿ, 60 ಕೆ.ಜಿ ವಿಭಾಗದ, ಶ್ರೀ ವಿಷ್ಣು ಟ್ರೋಫಿ 2020 ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ, ಜನವರಿ 1 1ರಂದು ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲಾ ವಠಾರ ಮಲ್ಲಡ್ಕದಲ್ಲಿ ನಡೆಯಲಿದೆವೇದಮೂರ್ತಿ ಪಂಡಿತ್ ಕಳೆಂಜ ಕೃಷ್ಣಮೂರ್ತಿ ಕಾರಂತ್ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶೇಖರ್ ರೈ ಕೆ. ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜು ಪೆರ್ನೆ ಪ್ರಾಂಶುಪಾಲರು ವಹಿಸಲಿದ್ದಾರೆ. ಇನ್ನೂ ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕಮಲಾಕ್ಷಿ ಕೆ ಪೂಜಾರಿ, ನವೀನ್ ಪದಬರಿ, ಅರುಣ್ ಕುಮಾರ್ ಪುತ್ತಿಲ, ಹಾಗೂ ಅನೇಕ ಅತಿಥಿಗಳು ಪಾಲ್ಗೊಳಲ್ಲಿದ್ದಾರೆ.

ಇನ್ನು ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 6020₹ ಹಾಗೂ ಶ್ರೀ ವಿಷ್ಣು ಟ್ರೋಫಿ, ದ್ವಿತೀಯ ಬಹುಮಾನ 4020 ₹ಹಾಗೂ ವಿಷ್ಣು ಟ್ರೋಫಿ, ತೃತೀಯ ಬಹುಮಾನ 2020₹ ಹಾಗೂ ವಿಷ್ಣು ಟ್ರೋಫಿ, ಇನ್ನೂ ಚತುರ್ಥ ಬಹುಮಾನ 2020 ₹ಹಾಗೂ ಶ್ರೀ ವಿಷ್ಣು ಟ್ರೋಫಿ ಸಿಗಲಿದೆ. ಜೊತೆಗೆ ಉತ್ತಮ ಹಿಡಿತಗಾರ ಧಾಳಿಗಾರ ಹಾಗೂ ಸವ್ಯಸಾಚಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು