Recent Posts

Tuesday, January 21, 2025
ಸುದ್ದಿ

ಮಹಿಳೆಗೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ ಮನೋರೋಗಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲು – ಕಹಳೆ ನ್ಯೂಸ್

ಉಡುಪಿ : ಲಕ್ಷೀನಗರದ ಮುಖ್ಯರಸ್ತೆಯಲ್ಲಿ, ಇಂದು ಬೆಳಗಿನ ಜಾವ ೫ ಗಂಟೆಗೆ ಅಪರಿಚಿತ ಮನೋರೋಗಿ ಯುವಕನೋರ್ವ, ಕಲ್ಲನ್ನು ಹಿಡಿದು ಮಹಿಳೆ ಇರುವ ಮನೆಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದಾತನನ್ನು, ವಿಶು ಶೆಟ್ಟಿ ಅಂಬಲಪಾಡಿಯವರು ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನು ನಿಶ್ಕಾಂತ್ ಒರಿಸ್ಸಾ ಮೂಲದವನಾಗಿದ್ದು, ೫ ವರುಷದ ಹಿಂದೆ ಮದುವೆ ಆಗಿ, ಮಡದಿ ಬಿಟ್ಟಿದ್ದಾಳೆ, ತಾನು ಯಾಕೆ ಉಡುಪಿಗೆ ಬಂದಿದ್ದೇನೆ ಎಂದು ಹೇಳಲು ಗೊತ್ತಾಗುತ್ತಿಲ್ಲ ಎಂದಿದ್ದಾನೆ.

ಕಾಲಿನಲ್ಲಿ ಬಹಳಷ್ಟು ಕೀರಿದ ಗಾಯಗಳಿವೆ. ಈತನ ವರ್ತನೆಯಿಂದಾಗಿ ಸಾರ್ವಜನಿಕರಿಂದ ಹಲ್ಲೆಗೆ ಒಳಗಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಗೆ ನುಗ್ಗಿದ ಸಂದರ್ಭ ಸಾರ್ವಜನಿಕರು ಈತನನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ವಿಷಯ ತಿಳಿದ ವಿಶು ಶೆಟ್ಟಿ, ನಗರ ಠಾಣೆಯ ಪೋಲಿಸ್ ಮನೋಹರ್ ಹಾಗೂ ಸಂತೋಷ್‌ರವರ ಸಹಾಯದಿಂದ ಯುವಕನನ್ನು ವಶಕ್ಕೆ ಪಡೆದು, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು