Monday, January 20, 2025
ಸುದ್ದಿ

ಪಡಿತರ ಚೀಟಿದಾರರೇ ಗಮನಿಸಿ : ಇ-ಕೆವೈಸಿ ಮತ್ತೆ ಪುನರ್ ಆರಂಭ, ತಪ್ಪದೇ ಮಾಡಿಸಿ-ಕಹಳೆ ನ್ಯೂಸ್

ಧಾರವಾಡ : ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸುವುದನ್ನು ಆಹಾರ ನಾಗರೀಕ ಸರಬರಾಜು ಇಲಾಖೆ ಕಡ್ಡಾಯಗೊಳಿಸಿತ್ತು. ಹೀಗೆ ಕಡ್ಡಾಯಗೊಳಿಸಿದ್ದರು ಕೆಲ ಪಡಿತರ ಚೀಟಿದಾರ ಕುಟುಂಬಗಳು ಇ-ಕೆವೈಸಿಯನ್ನು ಅಂತಿಮ ಗಡುವು ಮುಗಿದರೂ ಮಾಡಿಸಿರಲಿಲ್ಲ. ಇದೀಗ ಇಂತಹ ಕುಟುಂಬಗಳಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸೋದು ಮರೆಯಬೇಡಿ.

ಇ-ಕೆವೈಸಿ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ದಾರರು ಕಡ್ಡಾಯವಾಗಿ ಮಾಡಿಸಲೇಬೇಕಾಗಿದೆ. ಈ ಕುರಿತಂತೆ ಈಗಾಗಲೇ ಆಹಾರ ನಾಗರೀಕ ಸರಬರಾಜು ಇಲಾಖೆ, ಇಂತಿಷ್ಟು ದಿನಗಳಲ್ಲಿ ಮುಗಿಸಬೇಕು ಎಂಬುದಾಗಿ ಕಡ್ಡಾಯಗೊಳಿಸಿತ್ತು. ಆದ್ರೂ ಕೆಲ ಕುಟುಂಬಗಳು ಅಂತಿಮ ಗಡುವಿನಲ್ಲಿ ಇ-ಕೈವೈಸಿ ಮಾಡಿಸಲು ಆಗಿರಲಿಲ್ಲ. ಹೀಗಾಗಿ ಇದೀಗ ಪಡಿತರ ಚೀಟಿಗಳ ಫಲಾನುಭವಿಗಳ ಆಧಾರ್ ಸಂಖ್ಯೆ ಇ-ಕೆವೈಸಿ ಮೂಲಕ ದೃಢೀಕರಿಸಲು ಪುನರ್ ಆರಂಭಿಸಲಾಗಿದೆ. ತಮ್ಮ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಇ-ಕೆವೈಸಿ ಮಾಡಿಸುವಂತೆ ಇದೀಗ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೇ ಕೆಲ ಪಡಿತರ ಚೀಟಿದಾರರಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್ ಗೆ ರೂ.5 ಹಣ ಪಡೆದು ಇ-ಕೆವೈಸಿ ಮಾಡಿಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಖಡಕ್ ಎಚ್ಚರಿಕೆ ನೀಡಿರುವ ಇಲಾಖೆ, ಪಡಿತರ ಚೀಟಿದಾರರು ಅಂಗಡಿಯವರಿಗೆ ಹಣ ಕೊಡಬೇಕಿಲ್ಲ. ಒಂದು ವೇಳೆ ಹಣಕ್ಕೆ ಬೇಡಿಕೆ ಇಟ್ಟರೆ ಆಹಾರ ನಾಗರೀಕ ಸರಬರಾಜು ಇಲಾಖೆಗೆ ದೂರು ನೀಡಬಹುದೆಂಬುದಾಗಿಯೂ ಇದೇ ಸಂದರ್ಭದಲ್ಲಿ ಇಲಾಖೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು