ನವದೆಹಲಿ, ಡಿಸೆಂಬರ್ 22: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ರೈಲ್ವೆ ಇಲಾಖೆಗೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ಹಾಳು ಮಾಡಿರುವ ಕುರಿತು ಪರಿಹಾರ ಕೊಡುವಂತೆ ಸರ್ಕಾರದ ಮೆಟ್ಟಿಲೇರಿದೆ.
ಸಿಎಎ ಪ್ರತಿಭಟನಾಕಾರರು ಪ್ರತಿಭಟನೆಗೆ ರೈಲ್ವೆ ನಿಲ್ದಾಣ, ರೈಲುಗಳನ್ನು ಹಾಳುಗೆಡವಿದ್ದಾರೆ ಅದಕ್ಕೆ ಪರಿಹಾರ ನೀಡಲೇಬೇಕು. ಪ್ರತಿಭಟನೆಗೋಸ್ಕರ ಸಾರ್ವಜನಿಕರ ಆಸ್ತಪಾಸ್ತಿಗಳನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ರೈಲ್ವೆ ಇಲಾಖೆಯು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಪೌರತ್ವ ಪ್ರತಿಭಟನೆ ವ್ಯಾಪಕ; ಉತ್ತರಪ್ರದೇಶದಲ್ಲಿ 11 ಜನ ಸಾವು, ಬಿಹಾರ ಬಂದ್
ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಇಲಾಖೆ ಸುಮಾರು 90 ಕೋಟಿ ರೂ.ನಷ್ಟು ನಷ್ಟ ಉಂಟಾಗಿದೆ. ಆಸ್ತಿಗಳನ್ನು ನಾಶಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
2016ರಲ್ಲಿ ಹರ್ಯಾಣದಲ್ಲಿ ರೈಲ್ವೆ ನಿಲ್ದಾಣದೆದುರು ಯಾರಿಗೂ ಪ್ರತಿಭಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಅಪೆಕ್ಸ್ ಕೋರ್ಟ್ ತಿಳಿಸಿತ್ತು. ಹಾಗೆಯೇ ರೈಲ್ವೆ ಇಲಾಖೆಯ ಆಸ್ತಿ ಪಾಸ್ತಿಗಳನ್ನು ಹಾಳುಗೆಡವಿದರೆ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಕೂಡ ಹೇಳಿತ್ತು.
ಮುಸ್ಲೀಮರಂತೆ ವೇಷ ಧರಿಸಿ ಕಲ್ಲು ತೂರಿದ ಬಿಜೆಪಿ ಕಾರ್ಯಕರ್ತರ ಬಂಧನ
ಇನ್ನು ಕರ್ನಾಟಕದಲ್ಲಿ ರೈಲ್ವೆ ಇಲಾಖೆಗೆ ಸೇರಿದ ಆಸ್ತಿ ಅಥವಾ ರೈಲುಗಳನ್ನು ಧ್ವಂಸಗೊಳಿಸಿದರೆ ಕಂಡಲ್ಲಿ ಗುಂಡು ಹಾರಿಸಿ ಎಂದು ರೈಲ್ವೆ ಸಚಿವ ಸುರೇಶ್ ಅಂಗಡಿ ಹೇಳಿಕೆ ನೀಡಿದ್ದರು.