ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 8 ನೇ ವರ್ಷದ ” ಸುವರ್ಣಾಸ್ ಸಾಂಸ್ಕೃತಿಕ ಕಲಾವೈಭವ , ಪುಣ್ಯಭೂಮಿ ಭಾರತ ನುಡಿನಾಡಿನ ನಾಟ್ಯಾಮೃತ ಕಾರ್ಯಕ್ರಮ ಸುವರ್ಣ ರಂಗ ಸಮ್ಮಾನ ಕಾರ್ಯಕ್ರಮ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ಫೆ. 20 ರಂದು ಸಂಜೆ 6ಕ್ಕೆ ನಡೆಯಲಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ. ಸುವರ್ಣ ಹೇಳಿದರು.
ಮಂಗಳೂರು ಸನಾತನಾ ನಾಟ್ಯಾಲಯದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಸ್ವಾಮಿ ವಿವೇಕಾನಂದರ ಮಾನವ ನಿರ್ಮಾಣದ ಸಂಕಲ್ಪ ಸಿಂಧುವಿನೆಡೆಗೆ ಬಿಂದುವಾಗಿ ಸಾಗುವ ಸದಾಶಯದೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುವರ್ಣ ರಂಗ ಸಮ್ಮಾನ್
ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು. ಕನ್ನಡ ಚಿತ್ರರಂಗದ ಹಿರಿಯ ಅಭಿನಯತ್ರಿ ಲೀಲಾವತಿ, ಚಿತ್ರನಟ ನವೀನ್ ಡಿ. ಪಡೀಲ್, ಯಕ್ಷಗಾನ ಕಲಾವಿದ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಸಮೂಹ ಉಜಿರೆ, ಶ್ರೀಗುರುಮಿತ್ರ ಸಮೂಹ ಬೆಳ್ತಂಗಡಿ, ಆಮಂತ್ರಣ ಪರಿವಾರ ಅಳದಂಗಡಿ, ಯಂಗ್ ಚಾಲೆಂಜರ್ಸ್ ಕ್ಲಬ್ ಮುಂಡಾಜೆ ಇವರಿಗೆ ಸಾಂಸ್ಕೃತಿಕ ಸಂಸ್ಥೆಗೆ ಗೌರವ ಸನ್ಮಾನ ನೀಡಲಿದೆ.
ವರದಿ : ಕಹಳೆ ನ್ಯೂಸ್ಇ