ಹೈದರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಟ್ವೀಟ್ನಲ್ಲಿ ಆಕ್ರೋಶ ಹೊರಹಾಕಿ ಪ್ರತಿಭಟನೆಗೆ ಪ್ರಚೋದನೆ ನೀಡಿದ ಬಾಲಿವುಡ್ ನಟ ಮತ್ತು ಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲಾಗಿದೆ.
ಹಿಂದೂ ಸಂಘತಾನ್ ಸಂಸ್ಥಾಪಕ ಕರುಣಾ ಸಾಗರ್ ಎಂಬುವರು ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಅಖ್ತರ್ ವಿರುದ್ಧ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟಿಸುವ ಕಾಲ ಮುಗಿಯಿತು, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಎಲ್ಲರೂ ಸೇರೋಣ ಎಂಬ ಟ್ವೀಟ್ ಅನ್ನು ಅವರು ಮಾಡಿದ್ದರು. ಇದಕ್ಕೆ ಪರ ವಿರೋಧದ ಕಾಮೆಂಟ್ಸ್ಗಳು ಕೂಡ ವ್ಯಕ್ತವಾಗಿದ್ದವು.
ಕರುಣಾ ಸಾಗರ್ ದೂರು ನೀಡಿದ್ದಾರೆ. ಅಲ್ಲದೆ, ಫಾರುಖ್ ಅವರ ಟ್ವೀಟ್ ಪ್ರಚೋದನೆಯನ್ನು ನೀಡುವಂತಿದೆ ಎಂದು ಆರೋಪಿಸಿದ್ದಾರೆ.