Recent Posts

Monday, January 20, 2025
ಸುದ್ದಿ

ಪೌರತ್ವ ತಿದ್ದುಪಡಿ ವಿರೋಧಿ ಕಿಚ್ಚು : ಉತ್ತರಪ್ರದೇಶದಲ್ಲಿ ಸತ್ತವರ ಸಂಖ್ಯೆ 16 ಜನ-ಕಹಳೆ ನ್ಯೂಸ್

ರಾಮಂಪುರ : ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಉತ್ತರಭಾರತದ ರಾಜ್ಯಗಳಲ್ಲಿ ಅನೇಕ ಕಡೇ ವ್ಯಾಪಕ ಸ್ವರೂಪವನ್ನು ಪಡೆದಿದೆ. ಈ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಇದುವರೆಗೆ 16 ಜನರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಉತ್ತರ ಭಾರತದಲ್ಲಿ ದಿನೇ ದಿನೇ ಪೌರತ್ವ ವಿರೋಧಿ ಕಿಚ್ಚು ಹೆಚ್ಚಾಗುತ್ತಿದೆ. ಇಂತಹ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಕಳೆದ ನಿನ್ನೆಯಷ್ಟೇ ಉತ್ತರ ಪ್ರದೇಶದ ರಾಮಪುರದಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದ. ಈ ಮೂಲಕ ಇದುವರೆಗೆ ಪೌರತ್ವದ ಕಿಚ್ಚಿಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೇ ಕಳೆದ ಶುಕ್ರವಾರದಂದು ನಡೆದಿಗ್ಗ ಹಿಂಸಾಚಾರದಲ್ಲಿ 6 ಮಂದಿ ಮೃತಪಟ್ಟಿದ್ದರು. ಅಲ್ಲದೇ ಹಲವರು ಗಾಯಗೊಂಡಿದ್ದರು. ಇಂತಹ ಗಾಯಗೊಂಡವರಲ್ಲಿ ಐವರು ಕಳೆದ ನಿನ್ನೆ ಸಾವನ್ನಪ್ಪಿದ್ದಾರೆ. ಇದೇ ರೀತಿಯ ಹಿಂಸಾಚಾರದಲ್ಲಿ ಕಳೆದ ವಾರ ಮೂವರು ಮೃತಪಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು