ನವದೆಹಲಿ : ಫೇಸ್ ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದಿದ್ದು , ಸುಮಾರು 27 ಕೋಟಿ ಫೇಸ್ ಬುಕ್ ಬಳಕೆದಾರರ ಖಾಸಗಿ ಮಾಹಿತಿ ಇರುವ ದತ್ತಾಂಶ ಸೋರಿಕೆಯಾಗಿದೆ ಎಂದು ಬ್ರಿಟನ್ ನ ತಂತ್ರಜ್ಞಾನ ತನಿಖಾ ಸಂಸ್ಥೆ ಕಂಪ್ಯಾರಿಟೇಕ್ ಹಾಗೂ ಇಂಟರ್ ನೆಟ್ ಭದ್ರತಾ ತನಿಖೆದಾರ ಬಾಬ್ ದೈಶೆಂಕೋ ಮಾಹಿತಿ ನೀಡಿದೆ.
ಫೇಸ್ ಬುಕ್ ಬಳಕೆದಾರರ ಯುಸರ್ ಐಡಿ, ಫೋನ್ ನಂಬರ್ ಹಾಗೂ ಹೆಸರುಗಳು ಸೋರಿಕೆಯಾಗಿದ್ದು, ಇವು ವಿಯೆಟ್ನಾಮ್ ಕ್ರಿಮಿನಲ್ ಗಳು ಫೇಸ್ ಬುಲ್ ವಿಪಿಐ ಇಲ್ಲ ಸ್ಕ್ರೇಪಿಂಗ್ ಮೂಲಕ ಸೋರಿಕೆ ಮಾಡಿರಬಹುದು ಎನ್ನಲಾಗಿದ್ದು, ಈ ಮಾಹಿತಿಗಳಿಂದ ಬಳಕೆದಾರರ ಎಸ್ ಎಂಎಸ್, ಫೋನ್ ಮೂಲಕ ಸ್ಕ್ಯಾಮ್ ಮಾಡಬಹುದು ಎಂದು ಹೇಳಿದೆ.
ಟೆಕ್ ಕಂಪನಿಗಳಾದ ಗೂಗಲ್, ಫೇಸ್ ಬುಕ್ ಮತ್ತು ಆಪಲ್ ಮೇಲೆ ತನಿಖಾ ಸಂಸ್ಥೆಗಳು ಕಳೆದೊಂದು ವರ್ಷದಿಂದ ತೀವ್ರ ನಿಗಾ ಇಡುತ್ತಿದೆ. ಆದರೂ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ.