ಬೆಂಗಳೂರು, ಡಿಸೆಂಬರ್ 22 : ಸಾರಿಗೆ ಇಲಾಖೆ ವಾಹನ ಸವಾರರಿಗೆ ಮಹತ್ವದ ಸೂಚನೆ ನೀಡಿದೆ. 7 ದಿನಗಳಲ್ಲಿ ಸೂಚನೆಯನ್ನು ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ 50 ಮತ್ತು 51ರ ಹಾಗೂ Emblems And Names Act 1950A (Prevention Of Improper Use) Act 1950 ಕಲಂ 3, 4 ಮತ್ತು 5ರ ಉಲ್ಲಂಘನೆಯಾಗುವುದು ಎಂದು ಇಲಾಖೆ ಹೇಳಿದೆ.
ಸಂಚಾರಿ ನಿಯಮ ಉಲ್ಲಂಘನೆ; ದಂಡ ಎಷ್ಟು ಕಡಿತವಾಗಲಿದೆ?
ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ/ರಾಜ್ಯ ಮಾನವ ಹಕ್ಕುಗಳ ಆಯೋಗ ಹೆಸರನ್ನು ಹೋಲುವಂತಹ ರಾಷ್ಟ್ರೀಯ/ರಾಜ್ಯ ಮಾನವ ಹಕ್ಕುಗಳ ಸಂಸ್ಥೆ/ಒಕ್ಕೂಟ/ಇತ್ಯಾದಿ ಹೆಸರುಗಳನ್ನು ಚಿಹ್ನೆ/ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ಅಪರಾಧ.
ಇಂತಹವುಗಳನ್ನು ಹಾಕಿಕೊಂಡಿರುವ ವಾಹನ ಮಾಲೀಕರು ಮೇಲ್ಕಂಡ ಕಾಯ್ದೆಗಳ ಹಾಗೂ ನಿಯಮಗಳನ್ವಯ ದಂಡನೆಗೆ ಒಳಗಾಗಬೇಕಾಗುತ್ತದೆ. ತಪ್ಪಿದಲ್ಲಿ ನಿಯಮಾನುಸಾರ ಗಂಭೀರವಾದ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಓಲಾ ಶೇರ್, ಊಬರ್ ಪೂಲಿಂಗ್ ರದ್ದು
ಸಾರಿಗೆ ಮತ್ತು ಸುರಕ್ಷತೆ ಇಲಾಖೆ ಆಯುಕ್ತರು ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಪ್ರಕಟಗೊಂಡ ಒಂದ ವಾರದೊಳಗೆ ಅನಧಿಕೃತ ನೋಂದಣಿ ಫಲಕಗಳನ್ನು ತೆರವುಗೊಳಿಸಬೇಕು.
ನಾಮಫಲಕ ತೆರವುಗೊಳಿಸದಿದ್ದರೆ ನಿಯಮಾನುಸಾರ ಗಂಭೀರವಾದ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.