Sunday, November 24, 2024
ಸುದ್ದಿ

ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯವಾದದ್ದು-ಕಹಳೆ ನ್ಯೂಸ್

ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯವಾದದ್ದು.

ಈ ನಿಟ್ಟಿನಲ್ಲಿ ಮಜಿ ಸರಕಾರಿ ಶಾಲೆಯೊಂದಿಗೆ ಕೈಜೋಡಿಸಿದ ಲಯನ್ಸ್ ಕ್ಲಬ್ ಬಂಟ್ವಾಳ ಇವರ ಸೇವಾಮನೋಭಾವ ಮೆಚ್ಚುವಂತದ್ದು ಎಂದು ಲಯನ್ಸ್ ಜಿಲ್ಲಾ 317 -ಡಿ, ಇದರ ಉಪರಾಜ್ಯಪಾಲರಾದ ಶ್ರೀಯುತ ವಸಂತ ಕುಮಾರ್ ಶೆಟ್ಟಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಇದರ ವತಿಯಿಂದ ಪ್ರಾರಂಭವಾದ ಸ್ಮಾರ್ಟ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿ ಬಾಲ್ಯ ದಲ್ಲಿ ಮಕ್ಕಳ ಪ್ರತಿಭೆ ಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವ್ಯವಸ್ಥೆ ಮಾಡಿದರೆ ಯಾವ ಸರಕಾರಿ ಶಾಲೆಗಳು ಮುಚ್ಚಲು ಸಾಧ್ಯವಿಲ್ಲ , ಈ ನಿಟ್ಟಿನಲ್ಲಿ ಮಜಿ ಶಾಲೆಯ ಪರಿಸರವನ್ನು ಕಂಡಾಗಲೇ ಇಲ್ಲಿಯ ಶಿಕ್ಷಣದ ಗುಣಮಟ್ಟ ನಾವು ತಿಳಿಯಬಹುದು. ಮಜಿ ಶಾಲೆಯ ದತ್ತು ಸಂಸ್ಥೆ ಹಾಗೂ ಶಾಲಾಭಿವೃದ್ಧಿ ಸಮಿತಿಯ ಯೋಜನೆಯಂತೆ ಶತಮಾನ ಹೊಸ್ತಿಲಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೂರು ಕಾರ್ಯಕ್ರಮಗಳು ಶಾಲೆಯಲ್ಲಿ ನಡೆಯಲಿರುವುದರಿಂದ ಈ ಎಲ್ಲಾ ಕಾರ್ಯಗಳಿಗೆ ಲಯನ್ಸ್ ಕ್ಲಬ್ ಬಂಟ್ವಾಳ ಕೈಜೋಡಿಸುತ್ತದೆ ಎಂದರು

ಜಾಹೀರಾತು
ಜಾಹೀರಾತು
ಜಾಹೀರಾತು

.ಎಸ್ ಎಲ್ ಶ್ರೀಪಾದ ಅಸಿಸ್ಟೆಂಟ್ ಮೆನೇಜರ್ ಜೀವವಿಮಾ ನಿಗಮ ಬಂಟ್ವಾಳ ಇವರು ಮಾತನಾಡಿ ವಿಧ್ಯಾರ್ಥಿ ಯಾಗಿದ್ದಾಗ ತಾನು ಕಲಿತು ಬೆಳೆಸಿದ ಗುಣಗಳಿಂದ ಆತ್ಮವಿಶ್ವಾಸ ದ ಮೂಲಕ ಅವಕಾಶಗಳನ್ನು ಪಡೆದು ಯಶಸ್ಸು ಪಡೆಯಲು ಸಾಧ್ಯ ಎಂದರು
ಲಯನ್ ದಾಮೋದರ ಬಿ ಎಂ ಸಂಚಾಲಕರು ನಿರ್ಮಲ ಹೃದಯ ಫಿಸಿತೆರಪಿ ಸೆಂಟರ್ ಬಂಟ್ವಾಳ ಮಾತನಾಡಿ ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಹಕಾರ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶತಮಾನದ ಹೆಜ್ಜೆ ಯಲ್ಲಿರುವ ಮಜಿ ಶಾಲೆಯ ಶತಮಾನೋತ್ಸವ ಊರ ಹಬ್ಬವಾಗಿ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು .

ವೇದಿಕೆಯಲ್ಲಿ ಲಯನ್ಸ್ ಉಪಾಧ್ಯಕ್ಷ ಕೃಷ್ಣ ಶ್ಯಾಮ್, ಸದಸ್ಯರುಗಳಾದ ರಮೇಶ್ ಕುಲಾಲ್, ರಾಘವೇಂದ್ರ ಕಾರಂತ್, ಶ್ರೀಮತಿ ಪ್ರಮೀಳಾ ಶ್ರೀನಿವಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಭಾಗವಹಿಸಿದ್ದರು. ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಸ್ಮಾರ್ಟ್ ತರಗತಿಯ ಉದ್ದೇಶದ ಪ್ರಸ್ತಾಪನೆ ಜೊತೆಗೆ ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಧನ್ಯವಾದ ನೀಡಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರುಸಹಕರಿಸಿದರು.