ರಬಕವಿ-ಬನಹಟ್ಟಿ : ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸರಕಾರಿ ಕೆ.ಎಚ್.ಡಿ.ಸಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಬಕವಿ-ಬನಹಟ್ಟಿ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಮಕ್ಕಳಾದ ಹರ್ಷಿತಾ ಖಟಾವಕರ, ಫಯಾಜ ಮೋಮಿನ ಸಸಿಗೆ ನೀರುನಿಸುವುದರ ಮುಖಾಂತರ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಚಿಣಗಿ, ಮಕ್ಕಳ ಸಾಹಿತ್ಯ ಪರಿಷ್ಯತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ಈರಣ್ಣಾ ಲಟ್ಟಿ, ಶಿಕ್ಷಣ ಸಂಯೋಜಕರಾದ ಶ್ರೀ ಶ್ರೀಶೈಲ ಬುರ್ಲಿ, ಮಕ್ಕಳ ಸಾಹಿತ್ಯ ಪರಿಷ್ಯತ್ತಿನ ಉಪಾಧ್ಯಕ್ಷೆ ಶ್ರೀಮತಿ ಸುಪ್ರಿಯಾ ನಿಪ್ಪಾಣಿ, ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀ ಬಸಯ್ಯ ವಸ್ತ್ರದ, ತೇರದಾಳ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಸಿದ್ದಣ್ಣ ಕಮದಿನ್ನಿ, ಮಹಾಲಿಂಗಪೂರ ಮಕ್ಕಳ ಸಾಹಿತ್ಯ ಪರಿಷ್ಯತ್ತಿನ ಅಧ್ಯಕ್ಷ ಶ್ರಿಮತಿ ದ್ರಾಕ್ಷಾಯಿಣಿ ಮಂಡಿ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ದೀಪ ಬೆಳಗಿಸುವುದರ ಮುಕಾಂತರ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಆಸಿನರಾದ ಗೌರವಾನ್ವಿತ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ದಿವ್ಯಸಾನಿಧ್ಯ ವಹಿಸಿದ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಸಮಾಜದಲ್ಲಿ ಕೊಲೆ, ಸುಲಿಗೆ, ವಂಚನೆ, ದುರ್ನಡತೆಗಳಿಂದ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮ ಉಂಟಗುತ್ತಿದೆ ಅದನ್ನು ದೂರವಾಗಿಸಿ ಮಕ್ಕಳಲ್ಲಿ ಅಡಗಿದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವಲ್ಲಿ ಈ ಸಾಹಿತ್ಯ ಕಾರ್ಯಕ್ರಮಗಳು ಅತ್ಯಮೂಲ್ಯ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಧಾನ ವಹಿಸಿದ ಹಿರಿಯ ಮಕ್ಕಳ ಸಾಹಿತಿಗಳಾದ ಶ್ರೀ ಜಯವಂತ ಕಾಡದೇವರ ಅವರು ಮಕ್ಕಳನ್ನು ಉದ್ದೇಶಿಸಿ ಪ್ರೇರಣಾತ್ಮಕ ಕಥೆಗಳನ್ನು ಮಕ್ಕಳ ಕವನಗಳನ್ನು ಹೇಳುವ ಮೂಲಕ ಮಕ್ಕಳನ್ನು ನಗೆಗಡಲಲ್ಲಿ ಮುಳುಗಿಸಿದರು.
ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿದಂತಹ ಕೆ.ಎಚ್.ಡಿ.ಸಿ.ಶಾಲೆಯ ಮುಖ್ಯಗುರುಗಳಾದ ಶ್ರೀ ಬಿ.ಎಂ.ಪಾಟೀಲ ಅವರು ಮಾತನಾಡಿ ಪ್ರತಿಯೊಬ್ಬ ಮಕ್ಕಳಲ್ಲು ವಿಶಿಷ್ಠವಾದ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ ಅವುಗಳನ್ನು ಗುರುತಿಸಲು ಸಾಹಿತ್ಯ ಪರಿಷತ್ತ ವೇದಿಕೆ ಕಲ್ಪಿಸಿಕೊಡುವುದು ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಕೆ.ಎಚ್.ಡಿ.ಸಿ ಶಾಲೆ ಬನಹಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸುರು, ಸರಕಾರಿ ಶಾಲೆ ಕುಲಹಳ್ಳಿ ಇನ್ನೂ ಮುಂತಾದ ಶಾಲೆಗಳ ವಿದ್ಯಾರ್ಥಿಗಳು ಸ್ವರಚಿತ ಕವನವಾಚನ, ಸಾಹಿತಿಕ ಕಿರುನಾಟಕಗಳ ಪ್ರದರ್ಶನ, ಸಂಸ್ಕೃತ ಶ್ಲೋಕಗಳ ಓದು, ನೃತ್ಯ, ಸಂಗೀತ, ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ಶ್ರೀಮತಿ ಶೈಲಾ ಮಿರ್ಜೆ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ನಂದನಿ ಕುಲಕರ್ಣಿ ಸ್ವಾಗತಿಸಿದರು, ಶ್ರೀ ಸಿ.ಬಿ. ಜೈನಾಪೂರ ಪದಗ್ರಹಣ ನೆರವೇರಿಸಿದರು, ಶ್ರೀ ಕೆ.ಕೆ ಇಂಗಳಗಾವಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಪರಿಷ್ಯತ್ತಿನ ತಾಲೂಕಾ ಘಟಕದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಮನ್ಮಿ, ಕಿರಣ ಕರಲಟ್ಟಿ, ಚನಬಸಪ್ಪಾ ಪಾಲಭಾವಿ, ರಮೇಶ ಇಟಗೋಣಿ, ಸಂಜಯ ಮಹಾಜನ, ಶ್ರೀಶೈಲ ಕುಂಬಾರ, ದೊಡ್ಡವ್ವ ಚಾಂಬಾರ, ವಿದ್ಯಾ ನಡುವಿನಮನಿ, ವಾಣಿಶ್ರೀ ಕೋಷ್ಠಿ ಉಪಸ್ಥಿತಿತರಿದ್ದರು.