Thursday, November 28, 2024
ಸುದ್ದಿ

ಮದ್ಯ ಸೇವನೆ ಕುರಿತು ಬಹಿರಂಗವಾಗಿದೆ ಇಂಟ್ರಸ್ಟಿಂಗ್‌ ಮಾಹಿತಿ-ಕಹಳೆ ನ್ಯೂಸ್

ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದು ಗೊತ್ತಿದ್ರೂ ಅನೇಕರು ಅತಿಯಾದ ಮದ್ಯಸೇವನೆ ಮಾಡಿ ದಾರಿಯಲ್ಲಿ, ಮನೆಯಲ್ಲಿ ಗಲಾಟೆ ಮಾಡ್ತಾರೆ. ಸಾಮಾನ್ಯವಾಗಿ ಪಂಜಾಬಿನ ಜನರು ಹೆಚ್ಚು ಮದ್ಯಪಾನ ಮಾಡ್ತಾರೆ ಎಂಬ ಭಾವನೆಯಿದೆ. ಪಂಜಾಬ್ ಗಿಂತ ತ್ರಿಪುರಾ ಜನರು ಹೆಚ್ಚಿನ ಆಲ್ಕೋಹಾಲ್ ಸೇವನೆ ಮಾಡ್ತಾರೆ ಎಂಬುದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಸಮೀಕ್ಷೆ ಪ್ರಕಾರ ತ್ರಿಪುರಾದ ಶೇಕಡಾ 62ರಷ್ಟು ಮಂದಿ ಮದ್ಯಪಾನ ಮಾಡ್ತಾರಂತೆ. ಛತ್ತೀಸ್ಗಢದಲ್ಲಿ ಶೇಕಡಾ 57.2 ಮತ್ತು ಪಂಜಾಬ್ ನಲ್ಲಿ ಶೇಕಡಾ 51.70 ಮಂದಿ ಮದ್ಯ ವ್ಯಸನಿಗಳಂತೆ. ಬಿಹಾರ್ ಹಾಗೂ ಗುಜರಾತಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗಾಗಿ ಈ ಎರಡು ರಾಜ್ಯಗಳನ್ನು ಬಿಟ್ಟಲ್ಲಿ ರಾಜಸ್ಥಾನ ಹಾಗೂ ಮೇಘಾಲಯದ ಜನರು ಕಡಿಮೆ ಮದ್ಯಪಾನ ಮಾಡ್ತಾರಂತೆ. ರಾಜಸ್ಥಾನದಲ್ಲಿ ಶೇಕಡಾ 2.1 ಹಾಗೂ ಮೇಘಾಲಯದಲ್ಲಿ ಶೇಕಡಾ 3.4ರಷ್ಟು ಮಂದಿ ಮದ್ಯವ್ಯಸನಿಗಳಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುರುಷರಿಗಿಂತ ಮಹಿಳೆಯರು ಆಲ್ಕೋಹಾಲ್ ಸೇವನೆ ಬಗ್ಗೆ ಹೆಚ್ಚು ನಿಯಂತ್ರಣ ಹೊಂದಿರುತ್ತಾರೆ. ಪ್ರತಿ ಐದರಲ್ಲಿ ಒಬ್ಬ ಪುರುಷ ಮದ್ಯಪಾನ ಮಾಡಿದ್ರೆ ಪ್ರತಿ 16 ಮಹಿಳೆಯರಲ್ಲಿ ಒಬ್ಬರು ಮದ್ಯಪಾನ ಮಾಡ್ತಾರಂತೆ. ದೇಶದಲ್ಲಿ ಸುಮಾರು 16 ಕೋಟಿ ಜನರು ಮದ್ಯಪಾನ ಮಾಡ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು