ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್ ಅವರು ತಮ್ಮ ವಾಕ್ಚಾತುರ್ಯ ಹಾಗೂ ಇಂಗ್ಲಿಷ್ ಭಾಷಾ ಜ್ಞಾನದಿಂದ ಚಿರಪರಿಚಿತರಾಗಿದ್ದಾರೆ. ಆದರೆ ಇದೀಗ ಅವರು ಪೇಚಿಗೆ ಸಿಲುಕುವಂತಹ ಕೆಲಸ ಮಾಡಿದ್ದಾರೆ.
ಆದದ್ದೇನೆಂದರೆ ಸಿಎಎ ಹಾಗೂ ಎನ್ಆರ್ಸಿ ವಿರುದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ತಿಳಿಸಲು ಅವರು ಭಾರತ ನಕ್ಷೆಯುಳ್ಳ ಚಿತ್ರವನ್ನು ಟ್ವೀಟರ್ ನಲ್ಲಿ ಹಾಕಿದ್ದಾರೆ. ಆದರೆ ಆ ನಕ್ಷೆಯಲ್ಲಿ ಪಿಒಕೆ ಹಾಗೂ ಅಕ್ಸಾಯ್ ಚಿನ್ ಭಾರತದ ಭಾಗವಲ್ಲವೆಂದು ತೋರಿಸಿದ್ದಾರೆ.
ತಕ್ಷಣ ಅದು ವೈರಲ್ ಆಗಿದ್ದು ನೆಟ್ಟಿಗರು ತರೂರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಬಿತ್ ಪಾತ್ರಾ ಸಹಿತ ಹಲವು ಬಿಜೆಪಿ ಮುಖಂಡರೂ ಕೂಡ ಶಶಿ ತರೂರ್ ಅವರ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಶಶಿ ತರೂರ್ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅದರ ಬಗ್ಗೆ ಸ್ಪಷ್ಟನೆ ಇನ್ನೂ ಅವರಿಂದ ಕೇಳಿ ಬಂದಿಲ್ಲ.