Tuesday, November 26, 2024
ಸುದ್ದಿ

ಛತ್ತೀಸ್‍ಗಡ ಅರ್ಧದಷ್ಟು ಜನರಿಗೆ NRC ಕಂಟಕ-ಕಹಳೆ ನ್ಯೂಸ್

ರಾಯ್ಪುರ್- ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‍ಆರ್‍ಸಿ) ಜಾರಿಗೆ ತಂದರೆ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಮಂದಿ ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ಹೆಣಗಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಅವರಿಗೆ ಯಾವುದೇ ಭೂಮಿ ಅಥವಾ ಭೂ ದಾಖಲೆಗಳಿಲ್ಲ ಎಂದು ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅರ್ಧದಷ್ಟು ಜನರ ಯಾವುದೇ ದಾಖಲೆಗಳನ್ನು ಒದಗಿಸಿದರೂ ಅದರಲ್ಲಿ ಅವರ ಪೌರತ್ವವನ್ನು ಸಾಬೀತು ಪಡಿಸಲು ಅಸಾಧ್ಯವಾಗುತ್ತದೆ.

ಏಕೆಂದರೆ ಅವರ ವಂಶಜರು ಅನಕ್ಷರಸ್ಥರಾಗಿದ್ದು ವಿವಿಧ ರಾಜ್ಯ ಮತ್ತು ಹಳ್ಳಿಗಳಿಂದ ವಲಸೆ ಬಂದವರಾಗಿದ್ದಾರೆ. ಹೀಗಾಗಿ ಸರಿಯಾದ ದಾಖಲೆಗಳಿಲ್ಲದೆ ಇಲ್ಲಿನ ಮಂದಿ ಹೆಣಗಾಡಬೇಕಾಗಿದೆ. ಒಂದು ವೇಳೆ ರಾಜ್ಯದಲ್ಲಿ ಎನ್‍ಆರ್‍ಸಿ ಜಾರಿಗೆ ತಂದರೆ ಛತೀಸ್‍ಗಢದ ಅರ್ಧದಷ್ಟು ಜನ ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ ಅಥವಾ ನಾಗರಿಕ ನೋಂದಣಿಗೆ ಹರಸಾಹಸ ಮಾಡಬೇಕಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

1906ರಲ್ಲಿ ಆಫ್ರಿಕಾದಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಅಸ್ತಿತ್ವ ಗುರುತು ವ್ಯವಸ್ಥೆಯನ್ನು ಮಹಾತ್ಮ ಗಾಂಧಿಯವರನ್ನು ಪ್ರತಿಭಟಿಸಿದ್ದು ಕೂಡ ಇದೇ ಕಾರಣಕ್ಕಾಗಿ. ಎನ್‍ಆರ್‍ಸಿ ನಮ್ಮ ರಾಜ್ಯದಲ್ಲಿ ಜಾರಿಯಾಗುವುದಕ್ಕೂ ನಾನು ತೀವ್ರ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಭೂಪೇಶ್ ಬಾಘೇಲ್ ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು