Sunday, January 19, 2025
ಸುದ್ದಿ

ನೀಲಂ ಕಣಿವೆಯಲ್ಲಿನ ಉಗ್ರರ ನೆಲೆಗಳನ್ನು ಉಡಾಯಿಸಿದ ಭಾರತ, ಬೆಚ್ಚಿಬಿದ್ದ ಪಾಕ್-ಕಹಳೆ ನ್ಯೂಸ್

 

ಶ್ರೀ ನಗರ, ಡಿ.22- ಉಗ್ರಗಾಮಿಗಳಿಗೆ ವಿಧ್ವಂಸಕ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತ ಗಡಿಯಲ್ಲಿ ಕ್ಯಾತೆ ಮುಂದುವರಿಸಿದ್ದ ಪಾಕಿಸ್ತಾನ ಸೇನಾಪಡೆಗಳಿಗೆ ಭಾರತೀಯ ಯೋಧರು ಮತ್ತೊಮ್ಮೆ ಬಿಸಿ ಮುಟ್ಟಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನೀಲಂ ಕಣಿವೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಭಾರತದ ಈ ಮಿಂಚಿನ ಕಾರ್ಯಾಚರಣೆಯಿಂದ ಪಾಕಿಸ್ತಾನ ಮತ್ತೊಮ್ಮೆ ಹೆದರಿ ಕಂಗಾಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಸೇನೆ ದಾಳಿಗೆ ಹಲವು ಉಗ್ರರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದ್ದು, ಭಯೋತ್ಪಾದಕರ ಶಿಬಿರವಿದ್ದ ಸ್ಥಳವು ದಾಳಿಯಿಂದ ಹೊತ್ತಿ ಉರಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭಾರತೀಯ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನ ಗುರೇಜ್ ಸೆಕ್ಟರ್‍ನಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರ ಶಿಬಿರವೊಂದು ಪತ್ತೆಯಾಗಿತ್ತು. ಶಿಬಿರವನ್ನು ಗಡಿನಿಯಂತ್ರಣ ರೇಖೆ ಬಳಿ ಸ್ಥಾಪಿಸಿ ಉಗ್ರರನ್ನು ಭಾರತಕ್ಕೆ ಕಳುಹಿಸುವ ಉದ್ದೇಶವನ್ನು ಪಾಕಿಸ್ತಾನ ಸೇನೆ ಹೊಂದಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಗಡಿ ಪ್ರಾಂತ್ಯದಲ್ಲಿ ತಲೆ ಎತ್ತಿದ್ದ ಉಗ್ರರ ಶಿಬಿರವೊಂದನ್ನು ಭಾರತೀಯ ಸೇನೆ ನುಚ್ಚುನೂರು ಮಾಡಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ದಿಟ್ಟ ಪ್ರತ್ಯುತ್ತರ ನೀಡಿದೆ. ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಗಡಿಭಾಗದಲ್ಲಿ ಭಾರತೀಯ ಸೇನಾ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಭಾರತದ ಈ ವೇಗೋತ್ಕರ್ಷದ ಆಕ್ರಮಣ ಕಂಗಾಲಾಗುವಂತೆ ಮಾಡಿದೆ.

ಈ ನಡುವೆ ಗಡಿ ದಾಟಿ ದಾಳಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ತಳ್ಳಿ ಹಾಕಿರುವ ಭಾರತೀಯ ಸೇನೆ, ಪಾಕಿಸ್ತಾನ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ತಿಳಿಸಿದೆ.