ತಿರುವನಂತಪುರ, ಡಿ.22- ಕಾಂಗ್ರೆಸ್ನ ಪ್ರಭಾವಿ ನಾಯಕ ಮತ್ತು ಸಂಸದ ಶಶಿ ತರೂರ್ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಬರೆದಿದ್ದ ಪುಸ್ತಕವೊಂದರಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶ ಉಲ್ಲೇಖಿಸಿದ್ದಾರೆಂಬ ಪ್ರಕರಣ ಸಂಬಂಧ ಖ್ಯಾತ ಲೇಖಕರೂ ಆದ ಶಶಿ ತರೂರ್ ಅವರಿಗೆ ಕೇರಳ ನ್ಯಾಯಾಲಯವೊಂದು ಬಂಧನ ವಾರೆಂಟ್ ಜಾರಿ ಮಾಡಿದೆ.
ಸಮನ್ಸ್ ಜಾರಿಮಾಡಿದ್ದರೂ ವಿಚಾರಣೆಗೆ ಹಾಜರಾಗದ ಹಾಗೂ ತಮ್ಮ ವಕೀಲರನ್ನೂ ಕೋರ್ಟಿಗೆ ಕಳುಹಿಸಿದ ಕಾರಣ ಈ ವಾರೆಟ್ ಜಾರಿ ಆಗಿದೆ. ತರೂರ್ ಅವರು 1989ರಲ್ಲಿ ಬರೆದ ದಿ ಗ್ರೇಟ್ ಇಂಡಿಯನ್ ನಾವೆಲ್ ಪುಸ್ತಕದಲ್ಲಿ ನಾಯರ್ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶಗಳಿದ್ದವು ಎಂದು ಆರೋಪಿಸಲಾಗಿತ್ತು.