Sunday, January 19, 2025
ಸುದ್ದಿ

ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಬಲ ಪ್ರದರ್ಶನ-ಕಹಳೆ ನ್ಯೂಸ್

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನೂರಾರು ಮಂದಿ ಟೌನ್‌ಹಾಲ್‌ ಎದುರು ಭಾನುವಾರ ಘೋಷಣೆಗಳನ್ನು ಕೂಗಿದರು. ಕಾಯ್ದೆ ವಿರೋಧಿಸುತ್ತಿರುವವ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಆರಂಭದಲ್ಲಿ ಸುಮಾರು 250 ಮಂದಿ ಸೇರಿದ್ದರು. ಸಂಖ್ಯೆ ಕ್ರಮೇಣ ಹೆಚ್ಚಾಯಿತು. ಪ್ರಸ್ತುತ ಸುಮಾರು 400 ಮಂದಿ ಸೇರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಘೋಷಣೆಗಳ ಜೊತೆಗೆ ‘ಮೋದಿ’ ‘ಮೋದಿ’ ಎಂದು ಅವರು ಕೂಗುತ್ತಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆಯು ಜಾತ್ಯತೀತವಾಗಿದೆ. ಭಾರತವನ್ನು ಜಾತ್ಯತೀತ ಮೂಲಭೂತವಾದಿಗಳಿಂದ ಕಾಪಾಡಬೇಕಿದೆ’ ಎಂದು ಅವರು ತಂದಿರುವ ಭಿತ್ತಿಪತ್ರಗಳು ಹೇಳುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಗಳು ಪ್ರತ್ಯೇಕವಾದವುಗಳು. ಈ ಕಾಯ್ದೆಗಳಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಿಲ್ಲ. ಹಿಂದೂ ಅಥವಾ ಮುಸ್ಲಿಮರಿಗೆ ಈ ಕಾಯ್ದೆಗಳಿಂದ ಬಾಧಕವಿಲ್ಲ’ ಎಂದು ಕೆಲವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.