Sunday, January 19, 2025
ಸುದ್ದಿ

ಹಸಿವಿನ ಮಹತ್ವ ಗೊತ್ತಾಗಬೇಕಾದರೆ ಪುಟ್ಟ ಬಾಲಕಿಯ ಈ ವಿಡಿಯೋ ನೋಡಿ-ಕಹಳೆ ನ್ಯೂಸ್

ಹಸಿದವನಿಗೆ ತುತ್ತು ಅನ್ನದ ಮಹತ್ವ ಗೊತ್ತು ಎನ್ನುತ್ತಾರೆ. ನಾವು ನಮ್ಮ ಅಹಂಕಾರದಿಂದ ಅನ್ನದ ಮಹತ್ವ ಮರೆತು ಹೋಗುತ್ತೇವೆ.

ಹಿಂದೆ ಮುಂದೆ ನೋಡದೆ ಅನ್ನ ಚೆಲ್ಲುತ್ತೇವೆ. ಅನ್ನದ ಬೆಲೆ ಗೊತ್ತಾಗಬೇಕಾದರೆ ಈ ವಿಡಿಯೋವನ್ನೊಮ್ಮೆ ನೋಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ವರ್ಲ್ಡ್ಸ್ ಮೋಸ್ಟ್ ಅಮೇಜಿಂಗ್ ಫ್ಯಾಕ್ಟ್ಸ್ ಎನ್ನುವ ಫೇಸ್‌ ಬುಕ್ ಪುಟ ಹಂಚಿಕೊಂಡಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಅತ್ಯಂತ ಕಷ್ಟಕರವಾದ ಕೆಲಸ ಮಾಡುತ್ತಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರವಾದ ಮೇವನ್ನು ಹೊತ್ತು ನಡೆಯುವುದರಿಂದ ಹಿಡಿದು ಅಡುಗೆಗೆ ಸಹಾಯ ಮಾಡುವವರೆಗೆ ಕೆಲಸ ಮಾಡುತ್ತಾಳೆ.

ಕೊನೆಗೆ ಒಬ್ಬ ವ್ಯಕ್ತಿ ಬಂದು ತಿಂಡಿ ಪೊಟ್ಟಣ ಕೊಟ್ಟಾಗ ಅವಳು ಎಲ್ಲವನ್ನು ಮರೆತು ನಗುತ್ತಾಳೆ. ಅದನ್ನು ನೋಡಿ ಕರುಳು ಚುರುಕ್ ಎನ್ನುತ್ತದೆ. ಈ ವಿಡಿಯೋ ವೈರಲ್ ಆಗಿದ್ದು 1 ಲಕ್ಷದವರೆಗೆ ಪ್ರತಿಕ್ರಿಯೆ ಪಡೆದಿದೆ.

ಹಲವರು ಕಮೆಂಟ್ ಮಾಡಿದ್ದು ಬಾಲಕಿಯ ಪರಿಸ್ಥಿತಿ ನೋಡಿ ಮರುಗಿದ್ದಾರೆ. ಹಾಗೂ ನಮ್ಮ ಜೀವನದಲ್ಲಿ ಹೇಗೆ ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ಹೇಳಿದ್ದಾರೆ.