Recent Posts

Sunday, January 19, 2025
ಸುದ್ದಿ

ವರ್ಷಗಟ್ಟಲೆ ನಾಯಿ ಬಾಯಲ್ಲಿ ಅಡ್ಡಲಾಗಿ ಸಿಲುಕಿಕೊಂಡಿತ್ತು ಮೂಳೆ-ಕಹಳೆ ನ್ಯೂಸ್

ಸೇಂಟ್ ಪೀಟರ್ಸ್ ಬರ್ಗ್ (ಫ್ಲೋರಿಡಾ): ಸುಮಾರು 8 ವರ್ಷದ ಬಡ್ಡಿ ಎಂಬ ನಾಯಿಯ ಬಾಯಲ್ಲಿ ಕೆಲ ವರ್ಷಗಳಿಂದ ಸಿಲುಕಿಕೊಂಡಿದ್ದ ಮೂಳೆ ಚೂರೊಂದನ್ನು ತೆಗೆಯುವಲ್ಲಿ ಪಶುವೈದ್ಯರು ಯಶಸ್ವಿಯಾಗಿದ್ದಾರೆ. ಈ ಮೂಳೆ ಅಡ್ಡಲಾಗಿ ಸಿಲುಕಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಫ್ರೆಂಡ್ಸ್ ಆಫ್ ಸ್ಟ್ರೆಸ್ ಅನಿಮಲ್ ಶೆಲ್ಟರ್ ಎಂಬ ಸಂಘಟನೆಯೊಂದು ಈ ನಾಯಿಯನ್ನು ರಕ್ಷಿಸಿ ಹಲ್ಲು ಸ್ವಚ್ಛತೆಗೋಸ್ಕರ ವೈದ್ಯರಲ್ಲಿ ಕರೆತಂದಿದ್ದರೂ ವೈದ್ಯರು ಪರೀಕ್ಷಿಸುವ ವೇಳೆ ಹೀಗೆ ಮೂಳೆ ಚೂರು ಅಡ್ಡಲಾಗಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚೂರು ನಾಲ್ಕರಿಂದ ಐದು ವರ್ಷದ ಹಿಂದೆ ಸಿಲುಕಿಕೊಂಡಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರೀತಿ ಹಲ್ಲುಗಳಿಗೆ ಸಿಲುಕಿದ್ದರಿಂದ ಎರಡೂ ಬದಿಯಲ್ಲಿ ಕೊಳೆಯಲು ಪ್ರಾರಂಭಿಸಿದ್ದು, ಆ ಕಾರಣದಿಂದ ಎರಡೂ ಬದಿಯಲ್ಲಿ ಇರುವ ಬೇಡದ ಅಂಶಗಳನ್ನು ಕತ್ತರಿಸಿ ಗುಣಮುಖವನ್ನಾಗಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಳಿಕ ಈ ವಿಷಯವನ್ನು ಫೇಸ್ ಬುಕ್ ನಲ್ಲಿ ಸಂಘಟನೆ ಪೋಸ್ಟ್ ಮಾಡಿಕೊಂಡಿದ್ದು ಹಲವರಿಂದ ಕಮೆಂಟ್ ಗಳು ಬಂದಿವೆ.