ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂತೆಯೇ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಸಿಎಂ ಯಡಿಯೂರಪ್ಪ ಅವರನ್ನು ಮಾತನಾಡಿಸಲು ಪ್ರಯತ್ನ ನಡೆಸಿದ್ದು ಈ ವೇಳೆ ಅವರತ್ತ ಯಡಿಯೂರಪ್ಪ ತಿರುಗಿ ನೋಡದೇ ಮುಂದೆ ಸಾಗಿದ್ದಾರೆ. ಈ ವೇಳೆ ಶರತ್ ಬಚ್ಚೇಗೌಡ ಸಚಿವ ಆರ್. ಅಶೋಕ್ ಅವರನ್ನು ನೋಡಿ ನಕ್ಕು ಸುಮ್ಮನಾಗಿದ್ದಾರೆ.
ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ವಚನ ಸ್ವೀಕಾರ ಕಾರ್ಯಕ್ರಮದ ನಂತರ ನೂಕುನುಗ್ಗಲು ಉಂಟಾಗಿದ್ದು, ಶರತ್ ಬಚ್ಚೇಗೌಡ ಸಿಎಂ ಬಳಿ ಮಾತನಾಡಲು ಹೋಗಿದ್ದಾರೆ. ಆದರೆ ಅವರನ್ನು ತಿರುಗಿಯೂ ನೋಡದೆ ಸಿಎಂ ಮುಂದೆ ಸಾಗಿದ್ದಾರೆ ಎನ್ನಲಾಗಿದೆ.