Monday, November 25, 2024
ಸುದ್ದಿ

ಸಿಎಎ ವಿರುದ್ಧ ಪ್ರತಿಭಟನೆ; ಉ. ಪ್ರದೇಶದಲ್ಲಿ 16 ಸಾವು-ಕಹಳೆ ನ್ಯೂಸ್

ಲಕ್ನೋ, ಡಿಸೆಂಬರ್ 22 : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ 16 ಜನರು ಮೃತಪಟ್ಟಿದ್ದಾರೆ. ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಿಂದ ಅಪಾರವಾದ ನಷ್ಟ ಉಂಟಾಗಿದೆ. ಬಿಹಾರದಲ್ಲಿಯೂ ಭಾರಿ ಪ್ರತಿಭಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳು ಇನ್ನೂ ನಿಂತಿಲ್ಲ. ಆದ್ದರಿಂದ, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸರ್ಕಾರ ಎಲ್ಲಾ ದರ್ಜೆಯ ಪೊಲೀಸ್ ಸಿಬ್ಭಂದಿಗಳ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೌರತ್ವ ಕಾಯ್ದೆಯ ಪ್ರಶ್ನೆಗೆ ‘ಉತ್ತರ’ ಸಿಗದೇ ಹೊತ್ತಿ ಉರಿದ ‘ಪ್ರದೇಶ’!

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ಇರುವರೆಗೂ 705 ಜನರನ್ನು ಬಂಧಿಸಿದ್ದು, 4,500 ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿದವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೌರತ್ವ ಪ್ರತಿಭಟನೆ ವ್ಯಾಪಕ; ಉತ್ತರಪ್ರದೇಶದಲ್ಲಿ 11 ಜನ ಸಾವು, ಬಿಹಾರ ಬಂದ್

260 ಪೊಲೀಸ್ ಸಿಬ್ಬಂದಿಗಳು ಇದುವರೆಗೂ ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಿಂದಾಗಿ 57 ಜನರು ಗಾಯಗೊಂಡಿದ್ದಾರೆ. ನವದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕ ಭೀಮ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಬಂಧಿಸಲಾಗಿದೆ. 14 ದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ: ನಟ ಸಿದ್ದಾರ್ಥ್ ವಿರುದ್ಧ ಕೇಸ್

ಶನಿವಾರ ಉತ್ತರ ಪ್ರದೇಶದ ರಾಂಪುರದಲ್ಲಿ ಸಿಎಎ ಪರ ವಿರುದ್ಧ ಹೋರಾಟ ಮಾಡುತ್ತಿದ್ದವರ ನಡುವೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಪೊಲೀಸರು ಅಶ್ರುವಾಯು ಸಿಡಿಸಿ ಜನರನ್ನು ಚದುರಿಸಿದರು.