Friday, September 20, 2024
ಸುದ್ದಿ

ಪುತ್ತೂರಿನಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ಉದ್ದೇಶಿತ ಕಟ್ಟಡ ಶಿಲಾನ್ಯಾಸ ನೆರವೇರಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಪುತ್ತೂರು : ಆಧುನಿಕತೆಯು ಸಾಕಷ್ಟು ಮುಂದುವರಿಯುತ್ತಿದ್ದು ಮುಂದಿನ ದಿನಗಳಲ್ಲಿ ಶಿಕ್ಷಣದ ಪದ್ಧತಿಯು ಬದಲಾಗಲಿದೆ. ತರಗತಿಗಳು ಕ್ಲಾಸ್ ರೂಮ್ ನಲ್ಲಿ ನಡೆಯುವುದಿಲ್ಲ. ಮಕ್ಕಳು ಮನೆಯಲ್ಲೇ ಕುಳಿತು ಶಿಕ್ಷಣ ಪಡೆಯುವ ಸನ್ನಿವೇಶಗಳು ಬರಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.

ಅವರು ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಯೋಜಕತ್ವದಲ್ಲಿ ಈ ವರ್ಷ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡ ನೇರಂದ್ರ ಪದವಿ ಪೂರ್ವ ಕಾಲೇಜಿನ ಉದ್ದೇಶಿತ ಕಟ್ಟಡದ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಿಗೆ ಸಂಶೋಧನೆಯ ಬಗ್ಗೆ ಅರಿವು ಮೂಡಿಸಬೇಕು. ಶಿಶು ಮಂದಿರದಿಂದಲೇ ಕೌಶಲ್ಯಗಳನ್ನು ರೂಢಿಸಿಕೊಂಡ ಉತ್ತಮ ಶಿಕ್ಷಣ ಪದ್ಧತಿಬೇಕು. ಇಂದಿನ ಮಕ್ಕಳಲ್ಲಿ ಅಗಾಧವಾದ ಜ್ಞಾನ ಇದೆ. ಅದರ ಸದ್ಬಳಕೆಯಾಗಬೇಕಾದರೆ ಹೊಸ ಹೊಸ ವಿಚಾರಗಳ ಕುರಿತು ಚಿಂತನೆ ನಡೆಸಲು ಅವರಿಗೆ ವಾತಾವರಣ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಅವರು ಹೇಳಿದರು.

ಜಾಹೀರಾತು

ಭಾರತ ಯುವಕರ ರಾಷ್ಟ್ರ, ಜಗತ್ತನ್ನು ಗೆಲ್ಲುವ ಶಕ್ತಿ ನಮಗಿದೆ – ಕಲ್ಲಡ್ಕ ಪ್ರಭಾಕರ್ ಭಟ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಸಂಸ್ಥೆಯು ಕಳೆದ ಹತ್ತಾರು ವರ್ಷಗಳಿಂದ ದೇಶಭಕ್ತ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ಮಕ್ಕಳಲ್ಲಿ ಸಂಸ್ಕಾರದ ಜೊತೆ ಜೊತೆ ಶಿಕ್ಷವನ್ನು ನೀಡುತ್ತಿದೆ. ಭಾರತ ಯುವಕರ ದೇಶ, ಜಗತ್ತನ್ನು ಗೆಲ್ಲುವ ಶಕ್ತಿ ನಮಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಡಾ ಕೃಷ್ಣ ಭಟ್ , ಸಂಸ್ಥೆಯ ಅಧ್ಯಕ್ಷೆ ರೂಪರೇಖಾ, ಸಂಚಾಲಕ ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅನಂತ ಕುಮಾರ್ ಹೆಗಡೆಯವರ ಭಾಷಣ – ವಿಡಿಯೋ 

https://youtu.be/PPuYS9u3Tm8

ವರದಿ : ಕಹಳೆ ನ್ಯೂಸ್