ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವದ ಜಯದ ಬಳಿಕ ಅಧಿಕಾರದ ಗುದ್ದಿಗೆಗೆ ಮರಳಿದ ಪ್ರದಾನಿ ಮೋದಿಯವರು ಕಳೆದ 6 ತಿಂಗಳುಗಳ ಅವಧಿಯಲ್ಲಿ ಸಚಿವರು ತಮ್ಮ ಖಾತೆಯಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೆಂಬ ಕುರಿತಾಗಿ ಪ್ರಗತಿ ಪರಿಶೀಲನಾ ಸಬೆ ನಡೆಸಿದರು.
ದೆಹಲಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರದ ಸಭಾಂಘಣದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಆರಂಭವಾದ ಸಭೆಯು ಸಂಜೆಯವರೆಗೂ ಒಟ್ಟು 9 ಗಂಟೆಗಳ ಕಾಲ ನಡೆದಿದ್ದು, ಈ ವೇಳೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿಯತ್ತ ಗಮನ ಹರಿಸುವಂತೆ ಸಚಿವರಿಗೆ ಮೋದಿಯವರು ನಿರ್ದೇಶಿಸಿದರು. ಅಲ್ಲದೆ, ಕೃಷಿ ಮೂಲಭೂತ ಸೌಕರ್ಯ ಸೇರಿದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಅಂತರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳಲು ಅಧಿಕಾರಿಹಗಳು ಮತ್ತು ಸಚಿವರು ಕ್ರಮ ವಹಿಸಬೇಕೆಂದು ಸೂಚಿಸಿದರು.
ಅಲ್ಲದೆ, ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಹುಸಿ ಮಾಡುವ ಸಲುವಾಗಿ ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ನಿವಾರಮೆ ಕುರಿತಾದ ಕ್ರಮಗಳ ಬಗ್ಗೆ ಮೋದಿಯವರು ಸಚಿವರಿಗೆ ಪಾಠ ಮಾಡಿದರು.
ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಸಿಟಿ ಯೋಜನೆ, ನಮಾಮಿ ಗಂಗೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ರೈತರ ಆದಾಯ ದ್ವಿಗುಣ, ಪ್ರತಿಯೊಂದ ಮನೆಗೂ ನಲ್ಲಿ ನೀರು ಸೇರಿ ಇನ್ನಿತರೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದಲ್ಲಿ ಸಚಿವರು ಎದುರಿಸುತ್ತಿರುವ ಸವಾಲುಗಳೇನು ಬಹಿರಂಗಪಡಿಸಿ ಎಂದು ಸಚಿವರಿಗೆ ಮೋದಿ ಸೂಚಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.