Monday, January 20, 2025
ಸುದ್ದಿ

ಬ್ಯಾಟ್ ಹಿಡಿದ ಶಾಸಕಿ ಅಂಜಲಿ ನಿಂಬಾಳ್ಕರ್-ಕಹಳೆ ನ್ಯೂಸ್

ರಾಜಕೀಯವಾಗಿ ಸುದ್ದಿಯಾಗುತ್ತಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಇದೀಗ ಪಂದ್ಯಾವಳಿಯ ವೇಳೆ ಬ್ಯಾಟ್ ಬೀಸುವ ಮೂಲಕ
ಸುದ್ದಿಯಾಗಿದ್ದಾರೆ.

ಇವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶಾಸಕಿ ಬ್ಯಾಟಿಂಗ್‌ ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾನಾಪುರದ ಕಣಕುಂಬಿ ಗ್ರಾಮದಲ್ಲಿ ಯುವಕರ ತಂಡವೊಂದು ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮ ಉದ್ಘಾಟಿಸಲು ಶಾಸಕಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ಉದ್ಘಾಟನೆ ಮಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್‌, ಕ್ರಿಕೆಟ್ ಆಡುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಶಾಸಕಿ, ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಗೆ ಮೊರೆ ಹೋಗಿದ್ದಾರೆ. ಯಾವುದೇ ಆಟವಾಡಲು ಮೈದಾನ ಬಿಟ್ಟು ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ಆದರೆ ಮೈದಾನದಲ್ಲಿ ಆಟವಾಡುವುದರಿಂದ ಅವರು ದೈಹಿಕವಾಗಿ ಸದೃಡವಾಗುತ್ತಾರೆ. ಹಾಗಾಗಿ ಹೆಚ್ಚು ಹೆಚ್ಚು ಆಟಗಳನ್ನು ಆಡಬೇಕು ಎಂದರು.