Monday, January 20, 2025
ಸುದ್ದಿ

ಮರಿಗೆ ಜನ್ಮ ನೀಡಿದ ಖಡ್ಗಮೃಗದ ವಿಡಿಯೋ ʼವೈರಲ್ʼ-ಕಹಳೆ ನ್ಯೂಸ್

ಅಳಿವಿನ ಅಂಚಿನಲ್ಲಿ ಸಿಲುಕಿರುವ ಖಡ್ಗಮೃಗವೊಂದು ಇದೇ ಡಿಸೆಂಬರ್ 6 ರಂದು ಫ್ರಾನ್ಸ್ ನ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಗಂಡು ಮರಿಗೆ ಜನ್ಮ ನೀಡಿದೆ.

ಆಗ್ನೇಯ ಭಾಗದ ಲಾ ಟೆಸ್ಟೆ ಡೆ ಬುಚ್ ನಲ್ಲಿರುವ ಬಾಸಿನ್ ಡಿ’ಆರ್ಕ್ಯಾಕೋನ್ ಪ್ರಾಣಿ ಸಂಗ್ರಹಾಲಯದಲ್ಲಿ ಜನ್ಮ ನೀಡಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಜನ್ಮ ನೀಡಿರುವ ನಬಿಲಾಳನ್ನು ಯುರೋಪಿಯನ್ ಸ್ಥಳೀಯ ಅಭಿವೃದ್ಧಿಗೋಸ್ಕರ ಆರು ವರ್ಷವಿರುವಾಗ ಈ ಪ್ರಾಣಿ ಸಂಗ್ರಹಾಲಯಕ್ಕೆ ತರಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಪುರುಷ ಸಂಗಾತಿಯನ್ನು ಜತೆಯಾಗಿಬಿಡಲಾಗಿತ್ತು ಎಂದು ತಿಳಿಸಿರುವ ಝೂ ಸಿಬ್ಬಂದಿ, ಈಗ ತಾಯಿ ಹಾಗೂ ಮರಿ ಆರೋಗ್ಯವಾಗಿದೆ ಎಂದು ಫೇಸ್ಬುಕ್ ಪುಟದಲ್ಲಿ ಹೇಳಿಕೊಂಡಿದೆ. ಫ್ರೆಂಚ್ ಝೂ ನಲ್ಲಿ ಹುಟ್ಟಿದ ಮೊದಲ ಕಪ್ಪು ಮರಿ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮರಿ 35ರಿಂದ 40 ಕೆಜಿ ಇದೆ.

ಈ ಪ್ರಾಣಿ ಸಂಗ್ರಹಾಲಯದಲ್ಲಿ ಹೆಣ್ಣು ಖಡ್ಗಮೃಗಗಳು ಹೆಚ್ಚಿವೆ. ಈ ವರ್ಷ ಯುರೋಪಿನಲ್ಲಿ ಹುಟ್ಟಿದ ಎರಡನೇ ಗಂಡು ಮರಿ ಇದಾಗಿದೆ. ಈ ಹಿನ್ನೆಲೆಯಲ್ಲಿ ಗಂಡು ಸಂತಾನವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಝೂನಲ್ಲಿ ಇದು ಮರಿ ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊವನ್ನು ಹರಿಬಿಡಲಾಗಿದ್ದು ವೈರಲ್ ಆಗಿದೆ.