Tuesday, January 21, 2025
ಸುದ್ದಿ

ಲಾರಿ- ಬುಲೆಟ್ ಢಿಕ್ಕಿ: ಹೊಟ್ಟೆ ಮೇಲೆ ಹರಿದ ಲಾರಿ, ಓರ್ವ ಸಾವು-ಇನ್ನೋರ್ವ ಗಂಭೀರ-ಕಹಳೆ ನ್ಯೂಸ್

ವಿಟ್ಲ: ಬುಲೆಟ್ ಬೈಕ್- ಎಂ. ಸ್ಯಾಂಡ್ ಲಾರಿ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಕರೋಪಾಡಿ ಗ್ರಾಮದ ಕೇರಳ- ಕರ್ನಾಟಕ ಗಡಿಭಾಗದ ಪಾದೆಕಲ್ಲುವಿನಲ್ಲಿರವಿವಾರ ಸಂಭವಿಸಿದೆ.

ಮುಗುಳಿ ನಿವಾಸಿ ಅನ್ವರ್ ಮೃತಪಟ್ಟ ಸವಾರ. ಸಹ ಸವಾರ ನವಾಫ್ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳಕ್ಕೆ ಎಂ.ಸ್ಯಾಂಡ್ ಸಾಗಾಟ ಮಾಡುವ ಲಾರಿ ಪಾದೆಕಲ್ಲು ತಿರುವಿನಲ್ಲಿ ಬೈಕ್ ಮತ್ತು ಸವಾರನ ಮೇಲೆ ಚಲಿಸಿದೆ. ಅನ್ವರ್ ಹೊಟ್ಟೆ ಮೇಲೆ ಲಾರಿ ಚಕ್ರ ಚಲಿಸಿದ್ದು ಆತನ ಶರೀರ ಛಿದ್ರಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳದಲ್ಲಿ ಸಾರ್ವಜನಿಕರು ಮರಳು ಲಾರಿಗಳ ಸಂಚಾರದ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ಪಡಿಸಿದರು. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ವಿಟ್ಲ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು. ಇದೀಗ ಪರಿಸ್ಥಿತಿ ಪೊಲೀಸ್ ನಿಯಂತ್ರಣದಲ್ಲಿದೆ.