Tuesday, January 21, 2025
ಸುದ್ದಿ

ಕಹಳೆ ನ್ಯೂಸ್ ವರದಿಗಾರನಿಗೆ ಮತ್ತೆ ಜೀವ ಬೆದರಿಕೆ ಒಡ್ಡಿದ ಅಕ್ರಮ ಮರಳು ದಂಧೆಕೋರರು: ಕಡಬ ಠಾಣೆಯಲ್ಲಿ ದೂರು ದಾಖಲು-ಕಹಳೆ ನ್ಯೂಸ್

ಹೋಟೆಲ್ ಒಂದಕ್ಕೆ ಉಪಹಾರ ಸೇವಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಕ್ಕ ಅಕ್ರಮ ಮರಳು ದಂಧೆಕೋರರು ನಮ್ಮ ವಾಹಿನಿಯ ವರದಿಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು ಈ ಬಗ್ಗೆ ಕಹಳೆ ನ್ಯೂಸ್ ವರದಿಗಾರ ಗಣೇಶ್ ಇಡಾಳ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವರದಿಗಾರ

ಈ ಹಿಂದೆ ಕೋಡಿಂಬಾಳ ಸಮೀಪದ ಕೋರಿಯಾರ್ ಎಂಬಲ್ಲಿ ಅಕ್ರಮ ಮರಳು ಮಾಫಿಯಾ ಬಗ್ಗೆ ವರದಿಗೆ ತೆರಳಿದ್ದ ವೇಳೆ ಗಣೇಶ್ ಇಡಾಳ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಅಜಯ್ ಮಾಯಿಪಾಜೆ ಹಲ್ಲೆ ಪ್ರಕರಣದ ಬಳಿಕ ಕೂಡ ಆತನ ಸ್ನೇಹಿತ ಕ್ರೈನ್ ಆಪರೇಟರ್ ಅನಿಲ್ ಮಾಲೇಶ್ವರ ಜೊತೆ ಸೇರಿ ಕೆಲ ತಿಂಗಳುಗಳ ಹಿಂದೆಯಷ್ಟೇ ಗಣೇಶ್ ಇಡಾಳ ಇವರ ಕಚೇರಿಗೆ ಬಳಿ ಬಂದು ಬೆದರಿಕೆ ಒಡ್ಡಿದ್ದರು.

ಈ ಬಗ್ಗೆ ವರದಿಗಾರ ಮೌಖಿಕವಾಗಿ ನೀಡಿದ ದೂರಿನ ಹಿನ್ನಲೆ ಗ್ರಾಮಾಂತರ ವೃತ್ತ ನಿರೀಕ್ಷಕರು ವಿಚಾರಣೆ ನಡೆಸಿ ಗಣೇಶ್ ಇಡಾಳ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು, ಆದ್ರೆ ನಿನ್ನೆ ಅದೇ ಅಜಯ್ ಮತ್ತು ಅನಿಲ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ,ಪ್ರಸ್ತುತ ಅಜಯ್ ಈ ಹಿಂದೆ ನೀಡಿದ್ದ ಪ್ರಕರಣದ ಬಗ್ಗೆ ಜಾಮೀನು ಪಡೆದುಕೊಂಡು ಬಂದಿದ್ದು ಇದೀಗ ಜಾಮೀನಿನ ಷರತ್ತಿನಲ್ಲಿಯೇ ಇರುವುದಾಗಿದೆ,ನನಗೆ ಈಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡುತ್ತಿರುವುದರಿಂದ ಅಜಯ್ ಹಾಗೂ ಅನಿಲ್ ಮೇಲೆ ಪ್ರಕರಣ ದಾಖಲಿಸಿ ಅಜಯ್ ಯ ಜಾಮೀನು ರದ್ದು ಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಕ್ಷಣೆ ನೀಡಬೇಕು ಎಂದು ಗಣೇಶ್ ಇಡಾಳ ದೂರಿನಲ್ಲಿ ತಿಳಿಸಿದ್ದಾರೆ.