Tuesday, January 21, 2025
ಸುದ್ದಿ

ಕಂಠಪೂರ್ತಿ ಮದ್ಯ ಕುಡಿಸಿದ ಮಧ್ಯ‌ ವಯಸ್ಕರು ಮಾಡಿದ್ದೇನು ಗೊತ್ತಾ-ಕಹಳೆ ನ್ಯೂಸ್

ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್ ಮಿರ್ಜಾಲ್ಗುಡ ಕ್ರಾಸ್ ಬಳಿ ಮಧ್ಯ ವಯಸ್ಕರಿಬ್ಬರು ಅತ್ಯಾಚಾರ ಎಸಗಿದ್ದಾರೆ.

60 ವರ್ಷದ ವೃದ್ಧೆ ಭಿಕ್ಷೆ ಬೇಡುವಾಗ ಆಕೆಗೆ ಮದ್ಯ ಕೊಡಿಸುವುದಾಗಿ ಮನೆಗೆ ಕರೆದುಕೊಂಡು ಹೋದ ಇಬ್ಬರು ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ. ಮಲ್ಕಾನ್ ಗಿರಿ ನಿವಾಸಿಗಳಾದ ಅಂತೋನಿ ಜಾರ್ಜ್(50) ಮತ್ತು ಆತನ ಸ್ನೇಹಿತ ನೆನವತ್ ವಿಜಯಕುಮಾರ್(53) ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಿಕ್ಷೆ ಬೇಡುತ್ತಿದ್ದ ವೃದ್ಧೆಯನ್ನು ಮನೆಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯ ಕುಡಿಸಿ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಸಗಿದ್ದಾರೆ. ಬೆಳಿಗ್ಗೆ ಎಚ್ಚರವಾದ ಬಳಿಕ ವೃದ್ಧೆ ಕೂಗಾಡಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿ ತನಿಖೆ ಕೈಗೊಂಡ ಪೊಲೀಸರು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು