Friday, November 29, 2024
ಸುದ್ದಿ

ಹೊಸ ವರ್ಷಾಚರಣೆಯ ಎಣ್ಣೆ ಪ್ರಿಯರಿಗೆ ಮೆಟ್ರೋ ಶಾಕ್-ಕಹಳೆ ನ್ಯೂಸ್

ಬೆಂಗಳೂರು, ಡಿಸೆಂಬರ್ 23: ಉದ್ಯಾನ ನಗರಿ ಬೆಂಗಳೂರಿನಲ್ಲಿ ಇದೇ ಡಿಸೆಂಬರ್ 31 ರಂದು ನ್ಯೂ ಇಯರ್ ಪಾರ್ಟಿ ಮಾಡಲು ಯುವಜನತೆ ಉತ್ಸುಕವಾಗಿದೆ. ಆದರೆ ಈ ಬಾರಿ ಪಾರ್ಟಿ ಮುಗಿಸಿಕೊಂಡು ತಡರಾತ್ರಿಯಲ್ಲಿ ಮೆಟ್ರೋ ಮೂಲಕ ಮನೆಗೆ ಹೋಗೋಣ ಅಂದುಕೊಂಡರೆ ಆ ಆಸೆ ನಿರಾಸೆಯಾಗಲಿದೆ.

ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಸಜ್ಜಾಗಿದೆ. ಹೀಗಾಗಿ ಬೆಂಗಳೂರಿಗರ ಅನುಕೂಲಕ್ಕಾಗಿ ನ್ಯೂ ಇಯರ್ ಮಿಡ್ ನೈಟ್ 2 ಗಂಟೆಯವರೆಗೆ ಮೆಟ್ರೋ ಸಂಚಾರ ವಿಸ್ತರಣೆ ಮಾಡಿರುವ ಬಿಎಂಆರ್ಸಿಎಲ್ ಇದರ ಜೊತೆ ಎಚ್ಚರಿಕೆಯನ್ನು ಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊರವರ್ತುಲ ರಸ್ತೆಗೆ ಮೆಟ್ರೋ; ಮೊದಲ ಹೆಜ್ಜೆ ಇಟ್ಟ ಬಿಎಂಆರ್‌ಸಿಎಲ್

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 31 ರ ಮಧ್ಯರಾತ್ರಿ ಪಾರ್ಟಿ ಮುಗಿಸಿ, ಫುಲ್ ಟೈಟ್ ಆಗಿ ಮೆಟ್ರೋದಲ್ಲಿ ಹೋಗಿ ಮನೆ ಸೇರ್ಕೊಳ್ಳೋಣ ಅಂತ ಪ್ಲಾನ್ ಮಾಡಿಕೊಂಡಿದ್ದರೆ ಮೆಟ್ರೋ ಸಂಸ್ಥೆ ಶಾಕ್ ನೀಡಿದೆ.

ಇತರೆ ರಾತ್ರಿಗಳಲ್ಲೇ ಮೆಟ್ರೋದಲ್ಲಿ ಕುಡುಕರ ಕಾಟ ತಡೆಯಲು ಆಗುತ್ತಿಲ್ಲ, ಇನ್ನು ನ್ಯೂ ಇಯರ್ ದಿನ ಅವರನ್ನು ಹಿಡಿಯಲು ಆಗಲ್ಲ ಅಂತ ಕೆಲ ಮಹಿಳಾ ಸಂಘಟನೆಗಳು ಕುಡುಕರಿಗೆ ಮೆಟ್ರೋದಲ್ಲಿ ಪ್ರವೇಶ ನೀಡಬಾರದು ಎಂದು ದೂರು ಕೊಟ್ಟಿದ್ದಾರೆ.

ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ

ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್ಸಿಎಲ್, ನ್ಯೂ ಇಯರ್ ರಾತ್ರಿ ಕುಡುಕರಿಗೆ ಮೆಟ್ರೋ ಹತ್ತಿಸದಿರಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹೀಗಾಗಿ ನ್ಯೂ ಇಯರ್ ಪಾರ್ಟಿ ಮುಗಿಸಿ, ಮೆಟ್ರೋ ಕಡೆ ಹೋದರೆ ನಿಮ್ಮನ್ನು ಬಿಟ್ಟುಕೊಳ್ಳುವುದಿಲ್ಲ.