ಕೋಲಾರ, ಡಿಸೆಂಬರ್ 23: ಕೋಲಾರದಿಂದ ಬೆಂಗಳೂರಿನ ಕಡೆ ತೆರಳುವ ಪ್ರಯಾಣಿಕರ ಬಹುದಿನದ ಕನಸು ಈಡೇರಿದೆ. ಕೋಲಾರ -ವೈಟ್ ಫೀಲ್ಡ್ ನಡುವೆ ಡೆಮು ವಿಶೇಷ ರೈಲು ಇಂದಿನಿಂದ ಸಂಚಾರ ಆರಂಭಿಸಿದೆ.
ಕೋಲಾರ -ವೈಟ್ ಫೀಲ್ಡ್ (06151X⇒06544 ಟ್ರೈನ್ ಸಂಖ್ಯೆ) ಡೆಮು ವಿಶೇಷ ರೈಲು ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ಮಾರ್ಗವಾಗಿ ವೈಟ್ ಫೀಲ್ಡ್ ತಲುಪಲಿದೆ.
ಸಬರ್ಬನ್ ರೈಲ್ವೆ ಯೋಜನೆ ಬಗ್ಗೆ ಸಂಸದ ಪಿ.ಸಿ. ಮೋಹನ್ ರಿಂದ ಮಹತ್ವ ಘೋಷಣೆ
ಭಾನುವಾರ ಹೊರತುಪಡಿಸಿ ಪ್ರತಿದಿನ ಈ ರೈಲು ಸಂಚರಿಸಲಿದ್ದು, ಬೆಳಗ್ಗೆ 7:30ಕ್ಕೆ ಕೋಲಾರದಿಂದ ಹೊರಟು ಬೆಳಗ್ಗೆ 10.55ಕ್ಕೆ ವೈಟ್ ಫೀಲ್ಡ್ ತಲುಪಲಿದೆ. ಮಧ್ಯಾಹ್ನ 4.15ಕ್ಕೆ ವೈಟ್ ಫೀಲ್ಡ್ ಬಿಟ್ಟು ರಾತ್ರಿ 7.40ಕ್ಕೆ ಕೋಲಾರ ರೈಲು ನಿಲ್ದಾಣ ತಲುಪಲಿದೆ.
ಮಾರ್ಗ(ಕೋಲಾರ-ವೈಟ್ ಫೀಲ್ಡ್): ಜನ್ನಘಟ್ಟ, ಗೊಟ್ಟಿಹಳ್ಳಿ, ದಳಸನೂರು, ಶ್ರೀನಿವಾಸಪುರ(7.58ಕ್ಕೆ), ದೊಡ್ಡಘಟ್ಟ, ಚಿಂತಾಮಣಿ, ಹುಣಸೇನಹಳ್ಳಿ, ಶಿಡ್ಲಘಟ್ಟ, ಗಿಡ್ಡನಹಳ್ಳಿ, ಚಿಕ್ಕಬಳ್ಳಾಪುರ(ಬೆಳಗ್ಗೆ 9.03ಕ್ಕೆ) ತಲುಪಲಿದೆ. ಇಲ್ಲಿಂದ ನಂದಿ, ವೆಂಕಟಗಿರಿಕೋಟ, ಆವತಿಹಳ್ಳಿ, ದೇವನಹಳ್ಳಿ, ದೊಡ್ಡಜಾಲ, ಬೆಟ್ಟಹಲಸೂರು, ಯಲಹಂಕ, ಚನ್ನಸಂದ್ರ, ಕೃಷ್ಣರಾಜಪುರಂ, ಹೂಡಿ ಹಾಗೂ ವೈಟ್ ಫೀಲ್ಡ್ (10.55ಕ್ಕೆ)
IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?
ಮಾರ್ಗ ವೈಟ್ ಫೀಲ್ಡ್ ಕೋಲಾರ: ವೈಟ್ ಫೀಲ್ಡ್(ಸಂಜೆ 4.10ಕ್ಕೆ), ಹೂಡಿ, ಕೆ. ಆರ್ ಪುರಂ, ಚನ್ನಸಂದ್ರ, ಯಲಹಂಕ, ಬೆಟ್ಟ ಹಲಸೂರು, ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ, ವೆಂಕಟಗಿರಿಕೋಟ, ನಂದಿ, ಚಿಕ್ಕಬಳ್ಳಾಪುರ, ಗಿಡ್ಡನಹಳ್ಳಿ, ಶಿಡ್ಲಘಟ್ಟ, ಹುಣಸೇಹಳ್ಳಿ, ಚಿಂತಾಮಣಿ, ದೊಡ್ಡಘಟ್ಟ, ಶ್ರೀನಿವಾಸಪುರ, ದಳಸನೂರು, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಕೋಲಾರ(7.40ಕ್ಕೆ) ತಲುಪಲಿದೆ.