Thursday, November 28, 2024
ಸುದ್ದಿ

ರಾಜಕಾರಣಿಗಳ ಸವಲತ್ತಿನ ವಿರುದ್ಧ ಭಾರಿ ಆಕ್ರೋಶ: ಪಿಂಚಣಿ ಸೌಲಭ್ಯ ತ್ಯಜಿಸಿದ ಫ್ರಾನ್ಸ್ ಅಧ್ಯಕ್ಷ-ಕಹಳೆ ನ್ಯೂಸ್

ಪ್ಯಾರಿಸ್, ಅಕ್ಟೋಬರ್ 23: ರಾಜಕಾರಣಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿರುವುದರ ವಿರುದ್ಧ ಫ್ರಾನ್ಸ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕ್ರಿಸ್ ಮಸ್ ಮತ್ತು ವರ್ಷಾಂತ್ಯದ ಸಂಭ್ರಮಕ್ಕೆ ಅಡ್ಡಿಪಡಿಸದಂತೆ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರಾನ್ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಪ್ರತಿಭಟನೆಯ ಕಿಚ್ಚನ್ನು ತಣ್ಣಗಾಗಿಸುವ ಸಲುವಾಗಿ ಅವರು ತಮಗೆ ಸಿಗುವ ಪಿಂಚಣಿ ಸೌಲಭ್ಯವನ್ನು ತ್ಯಜಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ.

ಫ್ರಾನ್ಸ್‌ನಾದ್ಯಂತ ರಾಜಕಾರಣಿಗಳ ವಿಶೇಷ ಸವಲತ್ತಿನ ವಿರುದ್ಧದ ಪ್ರತಿಭಟನೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ರೈಲು ಸಂಚಾರದ ರದ್ದತಿಯಿಂದ ರಜೆದಿನಗಳಿಗಾಗಿ ಮನೆಗೆ ತೆರಳಬೇಕಿರುವ ಪ್ರಯಾಣಿಕರು ಪರದಾಡುವಂತಾಗಿದೆ. ವಿದೇಶಗಳಿಂದ ಬಂದ ಪ್ರವಾಸಿಗರು ಸಾರಿಗೆ ಸಂಪರ್ಕ ವ್ಯವಸ್ಥೆ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫ್ರಾನ್ಸ್‌ನ ರಾಜಕೀಯ ಮುಖಂಡರು ತಮ್ಮ ಅಧಿಕಾರಾವಧಿ ಮುಕ್ತಾಯವಾದ ಬಳಿಕ ವಯಸ್ಸು ಅಥವಾ ಅವರ ಸಂಪತ್ತನ್ನು ಪರಿಗಣನೆಗೊಳಗಾಗದೆ ತಿಂಗಳಿಗೆ 6,220 ಯುರೋಗಿಂತಲೂ ಅಧಿಕ ಮೊತ್ತದ ಪಿಂಚಣಿಯನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತಾರೆ. ಫ್ರಾನ್ಸ್‌ ರಾಜಕೀಯದ 50 ವರ್ಷಕ್ಕೂ ಅಧಿಕ ವರ್ಷದಲ್ಲಿ ಮ್ಯಾಕ್ರನ್ ಅವರು ಈ ಪಿಂಚಣಿ ಹಣವನ್ನು ತ್ಯಜಿಸಿದ ಮೊದಲ ರಾಜಕಾರಣಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ಮಾಜಿ ಅಧ್ಯಕ್ಷರು ಜೀವಿತಾವಧಿ ಸದಸ್ಯರಾಗಿರುವ ಮತ್ತು ಮಾಸಿಕ 13,500 ಯುರೋ ಭತ್ಯೆ ಪಡೆದುಕೊಳ್ಳುವ ಫ್ರಾನ್ಸ್‌ನ ಸಾಂವಿಧಾನಿಕ ನ್ಯಾಯಾಲಯದ ಸ್ಥಾನವನ್ನು ಕೂಡ ಮ್ಯಾಕ್ರನ್ ಪಡೆದುಕೊಳ್ಳುವುದಿಲ್ಲ ಎಂದು ಅವರ ಕಚೇರಿ ತಿಳಿಸಿದೆ.

ಫ್ರಾನ್ಸ್‌ನಲ್ಲಿ ಖಾಸಗಿ ವಲಯದ ಉದ್ಯೋಗಿಗಳು ನಿವೃತ್ತಿ ಬಳಿಕ ತಿಂಗಳಿಗೆ 1,784 ಯುರೋ ಪಿಂಚಣಿ ಪಡೆದರೆ, ಸಾಮಾನ್ಯ ನಾಗರಿಕ ಸೇವಾ ವಲಯದ ಉದ್ಯೋಗಿಗಳು ತಿಂಗಳಿಗೆ 2,572 ಯುರೋ ಪಡೆಯುತ್ತಾರೆ. ಖಾಸಗಿ ವಲಯದ ಉದ್ಯೋಗಿಗಳಿಗೆ ವಿಶೇಷ ಪಿಂಚಣಿ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ.

ಮ್ಯಾಕ್ರನ್ ಅವರ ನಿರ್ಧಾರದಿಂದ 1955ರಿಂದಲೂ ಫ್ರಾನ್ಸ್‌ನ ಅಧ್ಯಕ್ಷರು ಪಡೆದುಕೊಳ್ಳುತ್ತಿದ್ದ ವಿಶೇಷ ಪಿಂಚಣಿ ಯೋಜನೆಯು ಅಂತ್ಯಗೊಳ್ಳುವ ಸಾಧ್ಯತೆ ಇದೆ.

ರಾಜಕಾರಣಿಗಳಿಗೆ ನೀಡಲಾಗುವ ವಿಶೇಷ ಸವಲತ್ತಿನ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ, ಉದ್ದೇಶಿತ ಪಿಂಚಣಿ ಬದಲಾವಣೆ ಯೋಜನೆಯ ವಿರುದ್ಧದ ಹೋರಾಟವು ಮುಖ್ಯವಾಗಿ ತಮ್ಮನ್ನೇ ವೈಯಕ್ತಿಕವಾಗಿ ಗುರಿಯನ್ನಾಗಿರಿಸಿಕೊಂಡಿದೆ ಎಂದು ಮ್ಯಾಕ್ರನ್ ಅರಿತುಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಹೆಚ್ಚಿನ ಬ್ಯಾನರ್‌ಗಳು ಮ್ಯಾಕ್ರನ್ ಅವರನ್ನು ರಾಜನಂತೆ ಚಿತ್ರಿಸಿರುವುದು ಇದನ್ನು ಸಂಕೇತಿಸಿವೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಮ್ಯಾಕ್ರನ್ ಅವರು ಅಧ್ಯಕ್ಷರ ಅಧಿಕೃತ ನಿವಾಸ ‘ಎಲಿಸೀ’ಯಲ್ಲಿ ದುಬಾರಿ, ಐಷಾರಾಮಿ ವಸ್ತುಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದೆ. ಅಧ್ಯಕ್ಷರ ಬೇಸಿಗೆ ನಿವಾಸದಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದೆ ಎಂದು ಈ ವರ್ಷದ ಆರಂಭದಲ್ಲಿ ಸರ್ಕಾರ ವಿರೋಧಿ ಪ್ರತಿಭಟನಾಕಾರರು ಆರೋಪಿಸಿದ್ದರು. ಮ್ಯಾಕ್ರನ್ ಮತ್ತು ಇತರೆ ಮಾಜಿ ಅಧ್ಯಕ್ಷರು ತಮ್ಮ ಕಚೇರಿಯ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಐಷಾರಾಮಿ ಬದುಕು ನಡೆಸುತ್ತಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.