Sunday, January 19, 2025
ಸುದ್ದಿ

ಪ್ರತಿಭಾ ಕುಳಾಯಿಗೆ ಛೀಮಾರಿ ಹಾಕಿದ ಶರತ್ ಮಡಿವಾಳ ಪೋಷಕರು – ಕಹಳೆ ನ್ಯೂಸ್

ಬಂಟ್ವಾಳ : ಪ್ರತಿಭಾ ಕುಳಾಯಿ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸಮಾವೇಶದಲ್ಲಿ ರಾಜಕೀಯ ಲಾಭಕ್ಕಾಗಿ ಶರತ್ ಮಡಿವಾಳ ಹತ್ಯೆಯನ್ನು ಬಳಸಿಕೊಂಡಿರುವುದನ್ನು ದಿ. ಶರತ್ ಹೆತ್ತವರು ತೀವ್ರವಾಗಿ ಖಂಡಿಸಿದ್ದಾರೆ.

ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರತ್ ‌ತಂದೆ ತನಿಯಪ್ಪ ಮಡಿವಾಳ ಹಾಗೂ ತಾಯಿ ನಳಿನಿ, ಪ್ರತಿಭಾ ಕುಳಾಯಿ ಯಾರೆಂದು ನನಗೆ ಗೊತ್ತಿಲ್ಲ. ಪತ್ರಿಕೆಯಲ್ಲಿ ಪ್ರತಿಕ್ರಿಯಿಸಿದ್ದೇನೆ ಎಂದು ಭಾಷಣದಲ್ಲಿ ಹೇಳುವ ಮೂಲಕ ಸಮಾಜದ ದಾರಿ ತಪ್ಪಿಸುವುದು ಮತ್ತು ರಾಜಕೀಯ ತೆವಲಿಗೆ ತನ್ನ ಮಗನ ಹತ್ಯೆಯನ್ನು ಬಳಸಲು ಪ್ರತಿಭಾ ಕುಳಾಯಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನನ್ನ ಮಗನ ಸಾವಿನ ನೋವಿನಿಂದ ಇನ್ನೂ ನಾವು ಹೊರಬಂದಿಲ್ಲ. ನೀತಿ ಗೆಟ್ಟ ರಾಜಕೀಯ ವ್ಯವಸ್ಥೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಇನ್ನು ಕೂಡ ಬಂಧಿಸಿಲ್ಲ. ದಕ್ಷ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸುದೀರ್ ಕುಮಾರ್ ರೆಡ್ಡಿ ಅವರು ಹಂತಕರನ್ನು ಬಂಧಿಸಿ ನ್ಯಾಯ ಒದಗಿಸುತ್ತಾರೆ ಎಂದು ನಂಬಿದ್ದೆ. ಆದರೆ ಇದೀಗ ಅವರನ್ನು ವರ್ಗಾಯಿಸಿ ಪ್ರಕರಣವನ್ನು ಹಳ್ಳ ಹಿಡಿಯುವಂತೆ ಮಾಡಲಾಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಕ್ಷೇತ್ರದವರೇ ಅಗಿದ್ದರೂ ರಾಜ್ಯ ಸರಕಾರದಿಂದ ನನ್ನ ಮಗನ ಸಾವಿಗೆ ನ್ಯಾಯ ಒದಗಿಸಿಲ್ಲ. ಈ ಬಗ್ಗೆ ಧ್ವನಿ ಎತ್ತದ ಪ್ರತಿಭಾ ತನ್ನ ಮಗನ ಹತ್ಯೆಯಲ್ಲಿ ರಾಜಕಾರಣ ಮಾಡಲು ಹೊರಟಿರುವುದು ಅವರಿಗೂ, ಕಾಂಗ್ರಸ್ ಪಕ್ಷಕ್ಕೂ ಶೋಭೆಯಲ್ಲ ಎಂದು ತನಿಯಪ್ಪ ಮಡಿವಾಳ ಆಕ್ರೋಶ ವ್ಯಕ್ತಪಡಿಸಿದರು.

ಆರ್ ಎಸ್ ಎಸ್ ಕಾರ್ಯಕರ್ತ ಎಂಬ ಏಕೈಕ ಕಾರಣಕ್ಕೆ ರಾಜಕೀಯ ಬೆಂಗಾವಲಿನಲ್ಲಿಯೇ ನನ್ನ ಮಗನ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ ಅವರು ನನ್ನ ಮಗನ ಸಾವಿನ ದು:ಖದಲ್ಲಿ ಸಂಘ ಪರಿವಾರದ ಎಲ್ಲಾ ಪ್ರಮುಖರು, ಸ್ವಯಂಸೇವಕರು ಭಾಗಿಯಾಗಿದ್ದರಲ್ಲದೆ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ನಮ್ಮ ಕುಟುಂಬದ ಜೊತೆಗಿದ್ದು, ಎಲ್ಲ ರೀತಿಯ ಸಹಕಾರ, ನೆರವು ನೀಡಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೆನೆ ಎಂದು ಹೇಳಿದರು.

ವರದಿ : ಕಹಳೆ ನ್ಯೂಸ್