Friday, November 29, 2024
ಸುದ್ದಿ

ಉಘೈರ್ ಮುಸ್ಲಿಮರ ಪರ ಹಾಂಕಾಂಗ್, ಪೊಲೀಸರ ಜೊತೆ ಸಂಘರ್ಷ-ಕಹಳೆ ನ್ಯೂಸ್

ಹಾಂಕಾಂಗ್, ಡಿಸೆಂಬರ್ 23: ಚೀನಾದ ಹಿಡಿದಲ್ಲಿದ್ದು ತುಳಿತಕ್ಕೊಳಗಾಗಿರುವ ಉಘೈರ್ ಮುಸ್ಲಿಮರ ಪರ ಹಾಂಕಾಂಗ್ ಪ್ರತಿಭಟನಾಕಾರರು ದನಿ ಎತ್ತಿದ್ದಾರೆ. ಪ್ರಜಾಪ್ರಭುತ್ವ ಪರ ಹೋರಾಟವನ್ನು ಮುಂದುವರೆಸಲಾಗಿದ್ದು, ಭಾನುವಾರದಂದು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಚೀನಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ.

ಪ್ರತಿಭಟನಾಕಾರರು ಕೆಲ ಸರ್ಕಾರಿ ಕಟ್ಟಡಗಳ ಮೇಲಿದ್ದ ಚೀನಾ ಧ್ವಜಗಳನ್ನು ತೆಗೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲು ಮುಂದಾದರು. ಆದರೆ, ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತಿರುಗಿಬಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಸಿಂಜಿಯಾಂಗ್ ಪ್ರದೇಶದಲ್ಲಿ ವಾಸವಿದ್ದ ಸುಮಾರು 1 ಲಕ್ಷ ಉಘೈರ್ ಮುಸ್ಲಿಮರನ್ನು ಬಂಧಿಸಿ ಚೀನಾ ಹಿಂಸೆ ನೀಡುತ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದರೂ, ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಪ್ರಜಾಪ್ರಭುತ್ವ ಪರ ಹೋರಾಟಗಾರರು ವಾದಿಸಿದ್ದಾರೆ. ಚೀನಾದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕ್ಸಿಂಜಿಯಾಂಗ್​ನಲ್ಲಿ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಚೀನಾದ ಕಮ್ಯೂನಿಸ್ಟ್ ಪಕ್ಷದ ವಿರುದ್ಧ ನಮ್ಮ ಆಕ್ರೋಶ, ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಜೂನ್ ಆರಂಭದಲ್ಲಿ ಆರಂಭವಾದ ಪ್ರತಿಭಟನೆಯಲ್ಲಿ ಇದುವರೆಗೂ ಸುಮಾರು 900 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದರು. ಹಾಂಕಾಂಗ್‌ನಲ್ಲಿನ ಯಾವುದೇ ಆರೋಪಿ ಅಥವಾ ಶಂಕಿತನ ವಿಚಾರಣೆ ನಡೆಸಿ ಶಿಕ್ಷೆಗೆ ಒಳಪಡಿಸಲು ಚೀನಾಕ್ಕೆ ಗಡಿಪಾರು ಮಾಡಬಹುದು ಎಂಬ ಮಸೂದೆಯನ್ನು ವ್ಯಾಪಕ ವಿರೋಧದ ನಡುವೆಯೂ ಅಂಗೀಕರಿಸಲಾಗಿತ್ತು. ಇದರಿಂದ ಹಾಂಕಾಂಗ್‌ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸಲಿದೆ. ಪ್ರಜೆಗಳ ಸ್ವಾತಂತ್ರ್ಯ ಹರಣ ನಡೆಯಲಿದೆ ಎಂದು ಆರೋಪಿಸಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಬೀದಿಗಿಳಿದು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಚೀನಾ ಹಾಂಕಾಂಗ್ ಮೇಲೆ ಒಂದು ದೇಶ ಎರಡು ವ್ಯವಸ್ಥೆ ನಿಯಮದ ಮೂಲಕ ಆಡಳಿತ ನಡೆಸುತ್ತಿದೆ. ಆದರೆ ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಮೈನ್​ಲ್ಯಾಂಡ್​ಗೆ ಕಳುಹಿಸುವ ಕುರಿತ ಪ್ರಸ್ತಾವನೆ ಬಗ್ಗೆ ಹಾಂಕಾಂಗ್​ನಲ್ಲಿ ಚೀನಾ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ.