ಡಿಸೆಂಬರ್ 26 ರಂದು ಗುರುವಾರ ಬೆಳಿಗ್ಗೆ ಕಂಕಣ ಸೂರ್ಯಗ್ರಹಣವಿದೆ. ಬೆಳಿಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಿ 9 ಗಂಟೆ 25 ನಿಮಿಷ ಗ್ರಹಣದ ಮಧ್ಯ ಕಾಲವಾಗಿದ್ದು, 11 ಗಂಟೆ 3 ನಿಮಿಷಕ್ಕೆ ಗ್ರಹಣ ಮುಕ್ತಾಯವಾಗಲಿದೆ. ಒಟ್ಟು ಗ್ರಹಣದ ಅವಧಿ 2 ಗಂಟೆ 58 ನಿಮಿಷ ಆಗಿರುತ್ತದೆ.
ಸೂರ್ಯಗ್ರಹಣದ ವೀಕ್ಷಣೆಯ ಆನಂದದ ಜೊತೆಗೆ ಕಣ್ಣಗಳ ಸುರಕ್ಷತೆಯು ಬಹಳ ಮುಖ್ಯ. ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಸೂರ್ಯ ಗ್ರಹಣ ವೀಕ್ಷಣೆಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಬರಿಗಣ್ಣಿನಿಂದ ನೋಡಿದರೆ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಸೂರ್ಯ ಗ್ರಹಣ ವೀಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳು
ಸೂರ್ಯನನ್ನು ಯಾವಾಗಲೂ ಬರಿಗಣ್ಣಿನಿಂದ ವೀಕ್ಷಿಸಬೇಡಿ
ಸೋಲಾರ ಫಿಲ್ಟರ್ ಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಿ
ವೀಕ್ಷಣೆಗಾಗಿ ತಿಳಿದವರ ಅಥವಾ ಮಾರ್ಗದರ್ಶಕರ ಸಲಹೆಗಳನ್ನು ಪಡೆಯಿರಿ
ವೀಕ್ಷಣೆಗಾಗಿ ಗುಣಮಟ್ಟದ ಸೋಲಾರ್ ಫಿಲ್ಟರ್ ಗಳನ್ನು ಉಪಯೋಗಿಸಿ
ಮಾರ್ಗದರ್ಶಕರ ಉಪಸ್ಥಿತಿಯಲ್ಲಿ ಮಕ್ಕಳು ಫಿಲ್ಟರ್ ಗಳನ್ನು ಬಳಸಿ ವೀಕ್ಷಿಸುವುದು ಒಳ್ಳೆಯದು
ಸೂರ್ಯನನ್ನು ಕೇವಲ ಕೆಲವೇ ಸೆಕೆಂಡುಗಳ ಮಾತ್ರ ವೀಕ್ಷಿಸಿ, ಪದೇ ಪದೇ ವೀಕ್ಷಿಸಬೇಡಿ
ಕಣ್ಣುಗಳ ಕಾಯಿಲೆ ಇರುವವರು ಗ್ರಹಣದ ವೇಳೆ ಸೂರ್ಯನನ್ನು ವೀಕ್ಷಿಸಬೇಡಿ
ಈ ಸೋಲಾರ್ ಫಿಲ್ಟರ್ ಗಳ ಫಿಲ್ಮ್ ಭಾಗಕ್ಕೆ ಮುಟ್ಟಬೇಡಿ, ಮಡಚಬೇಡಿ
ಸೋಲಾರ್ ಫಿಲ್ವರ್ ಹಾಳಾಗಿದಲ್ಲಿ ಅವುಗಳನ್ನು ಬಳಸಬೇಡಿ