ನವದೆಹಲಿ : ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಮುಂದಿನ ಬಾರಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಲೋಕಸಭೆ ಚುನಾವಣೆ ಎದುರಿಸುವ ವೇಳೆ ಬಿಜೆಪಿ ಜಾರ್ಖಂಡ್ ರಾಜ್ಯದ ಎಲ್ಲ ರಾಜ್ಯಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಆರು ರಾಜ್ಯಸಭಾ ಸ್ಥಾನಗಳ ಪೈಕಿ ಪ್ರಸ್ತುತ ಬಿಜೆಪಿ ಮೂರು, ಕಾಂಗ್ರೆಸ್ ಹಾಗೂ ಆರ್ ಜೆಡಿಎ ತಲಾ ಒಂದು ಹಾಗೂ ಪಕ್ಷೇತರ ಅಭ್ಯರ್ಥಿ ಪರಿಮಳ್ ನಾತ್ವಾನಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
2020, 2022 ಹಾಗೂ 2024 ರಲ್ಲಿ ರಾಜ್ಯಸಭೆಗೆ ಜಾರ್ಖಂಡ್ ನಿಂದ ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು. ಬಿಜೆಪಿ ಹಾಗೂ ಜೆಎಂಎಂ,ಕಾಂಗ್ರೆಸ್. ಆರ್ ಜೆಡಿ ಮೈತ್ರಿಕೂಟದ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಬೇಕಾದರೆ 28 ಶಾಸಕರ ಮತ ಅಗತ್ಯವಿದ್ದು, ಬಿಜೆಪಿ ಕೇವಲ 25 ಶಾಸಕರನ್ನುಹೊಂದಿದೆ.ಹೀಗಾಗಿ ಬಿಜೆಪಿ ರಾಜ್ಯಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.